ರಾಮಕುಂಜ: ಕೊಯಿಲ ಗ್ರಾಮದ ವಳಕಡಮದಿಂದ ಗುಂಡಿಜೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಂಕ್ರಿಟೀಕರಣಕ್ಕೆ ಮಾ.25ರಂದು ಗುದ್ದಲಿ ಪೂಜೆ ನಡೆಯಿತು.
ಕೊಯಿಲ ಗ್ರಾ.ಪಂ.ಅಧ್ಯಕ್ಷ ಹರ್ಷಿತ್ ಗುದ್ದಲಿ ಪೂಜೆ ನೆರವೇರಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಕಮಲಾಕ್ಷಿ, ಸದಸ್ಯರಾದ ಸೀತಾರಾಮ ಗೌಡ, ಲತಾ ನವೀನ್, ಎಪಿಎಂಸಿ ಮಾಜಿ ಸದಸ್ಯ ಶೀನಪ್ಪ ಗೌಡ ವಳಕಡಮ, ಸ್ಥಳೀಯ ಮುಖಂಡರಾದ ಆನಂದ ಗೌಡ ಗುಂಡಿಜೆ, ವಸಂತ ಗೌಡ ಗುಂಡಿಜೆ, ಧನಂಜಯ ಗೌಡ ದರ್ಖಾಸು, ಭುವನೇಶ್ ದರ್ಖಾಸು, ಯತೀಶ್ ಗೌಡ ಗುಂಡಿಜೆ, ಕುಂಞಣ್ಣ ಗೌಡ ಬಿರ್ಮಿಜಾಲ್, ರಾಮಚಂದ್ರ ಗೌಡ ಗುಂಡಿಜೆ, ಸೀತಾರಾಮ ಗೌಡ ದರ್ಖಾಸ್, ರಾಧಾಕೃಷ್ಣ ಗೌಡ ದರ್ಖಾಸು, ಭಾಸ್ಕರ ಗೌಡ ದರ್ಖಾಸು, ನೋಣಯ್ಯ ಗೌಡ ಗುಂಡಿಜೆ, ಗಿರಿಧರ ಗೌಡ ಗುಂಡಿಜೆ, ಮೇದಪ್ಪ ಗೌಡ ಗುಂಡಿಜೆ, ಕೊರಗಪ್ಪ ಪೂಜಾರಿ ಗುಂಡಿಜೆ, ಲೋಕೇಶ್ ಕುಂಬಾರ ಗುಂಡಿಜೆ ಮತ್ತಿತರರು ಉಪಸ್ಥಿತರಿದ್ದರು.
ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು:
ವಳಕಡಮ-ಗುಂಡಿಜೆ ರಸ್ತೆ ಕಾಂಕ್ರಿಟೀಕರಣಗೊಳಿಸಬೇಕೆಂದು ಒತ್ತಾಯಿಸಿ ಎರಡು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ನಾಮಫಲಕವೂ ಅಳವಡಿಸಿದ್ದರು. ಇದೀಗ ಸ್ಥಳೀಯ ಮುಖಂಡರ ಶಿಫಾರಸ್ಸಿನ ಮೇರೆಗೆ ಸಂಸದ ನಳಿನ್‌ಕುಮಾರ್ ಕಟೀಲ್‌ರವರು ಗುಂಡಿಜೆ ರಸ್ತೆ ಕಾಂಕ್ರಿಟೀಕರಣಕ್ಕೆ ೨೦ ಲಕ್ಷ ರೂ.ಅನುದಾನ ಮಂಜೂರುಗೊಳಿಸಿದ್ದಾರೆ.