ಪುತ್ತೂರು ಜಾತ್ರೆ ಗದ್ದೆ ಸ್ಥಳ ಬಾಡಿಗೆ, ಉತ್ಪನ್ನಗಳ ದರ ಕಡಿತಕ್ಕೆ ದೇವಳಕ್ಕೆ ಮನವಿ

0

ಪುತ್ತೂರು:ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ಏಲಂನಲ್ಲಿ ಪಡೆದ ಅಂಗಡಿಯಲ್ಲಿ ತಿಂಡಿ ಮತ್ತು ಮಾರಾಟ ವಸ್ತುಗಳ ದರ ಹಾಗು ಸ್ಟಾಲ್, ಜೋಯಿಂಟ್ ವ್ಹೀಲ್, ಕೊಲಂಬಸ್, ಟ್ರೈನ್ ಸಹಿತ ಇತರ ಮನೋರಂಜನಾ ಸಾಧನಗಳ ದರ ಕಡಿಮೆ ಮಾಡುವ ಮೂಲಕ ಬಡವರೂ ಜಾತ್ರೆಯ ಮಜಾ ಅನುಭವಿಸುವಂತಾಗಬೇಕು. ಈ ನಿಟ್ಟಿನಲ್ಲಿ ವ್ಯಾಪಾರ ದರಗಳನ್ನು ಕಡಿಮೆ ಮಾಡಿಸುವಂತೆ ನೆಲ್ಲಿಕಟ್ಟೆಯ ಹರಿಪ್ರಸಾದ್ ಮತ್ತು ಬಾಲಚಂದ್ರ ಸೊರಕೆ ಅವರು ದೇವಳಕ್ಕೆ ಮತ್ತು ಸಹಾಯಕ ಕಮಿಷನರ್ ಅವರಿಗೆ ಸಾರ್ವಜನಿಕ ಹಿತಾಸಕ್ತಿ ಆರ್ಜಿ ಸಲ್ಲಿಸಿದ್ದಾರೆ.

ಜಾತ್ರಾ ಗದ್ದೆಯಲ್ಲಿ ವ್ಯಾಪಾರ ನಡೆಸುವವರಿಗೆ ದೇವಳದಿಂದ ಸ್ಥಳ ಬಾಡಿಗೆ, ಏಲಂ ಮೊತ್ತವನ್ನು ಕಡಿಮೆ ದರದಲ್ಲಿ ನೀಡಬೇಕು. ಜಾತ್ರಾ ಗದ್ದೆಯ ಸ್ಟಾಲ್‌ಗಳಿಂದ ಪ್ರತ್ಯೇಕ ಕಸ ವಿಲೇವಾರಿ ದರ ವಸೂಲು ಮಾಡಬಾರದು. ಹೆಚ್ಚುವರಿ ಶೌಚಾಲಯ ವ್ಯವಸ್ಥೆ ಸಹಿತ ಹಲವು ಸೌಲಭ್ಯ ನೀಡುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಆಹಾರದ ಸುರಕ್ಷತೆಗೆ ಕ್ರಮಕ್ಕೆ ಮನವಿ: ಜಾತ್ರೆ ಗದ್ದೆಯಲ್ಲಿ ಆಹಾರ ಉತ್ಪನ್ನಗಳ ಮಾರಾಟದ ಸಂದರ್ಭ ಜನರ ಆರೋಗ್ಯದ ಹಿತದೃಷ್ಟಿಯಿಂದ ಆಹಾರದ ಸುರಕ್ಷತಾ ಕ್ರಮ ವಹಿಸುವಂತೆ ಹರಿಪ್ರಸಾದ್ ಶೆಟ್ಟಿ ಮತ್ತು ಬಾಲಚಂದ್ರ ಸೊರಕೆಯವರು ತಾಲೂಕು ಆರೋಗ್ಯಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here