ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಗೆ ಅನ್ನದಾಸೋಹ ಸೇವಾ ರಶೀದಿಯನ್ನು ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು.
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ ಅವರು ಅನ್ನದಾಸೋಹದ ಪ್ರಥಮ ಪುಸ್ತಕವನ್ನು ಪಡೆಯುವ ಮೂಲಕ ಚಾಲನೆ ನೀಡಿದರು.
ಅನ್ನಬ್ರಹ್ಮನ ಮಹಾಯಜ್ಞಕ್ಕೆ ಭಕ್ತರಿಗೆ ಅವಕಾಶ:
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಜಾತ್ರಾ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಬಳಿಕ ದೇವಳದ ಭಂಡಾರದಿಂದ ಅನ್ನಪ್ರಸಾದಕ್ಕೆ ಖರ್ಚು ಮಾಡಲಾಗುತ್ತಿತ್ತು. ಆದರೆ ಬಹಳಷ್ಟು ಮಂದಿ ಜಾತ್ರೆಯ ಸಂದರ್ಭ ಮಹಾಸೇವೆ ಮಾಡಿಸುವ ಬಗ್ಗೆ ವಿಚಾರಿಸುತ್ತಾರೆ. ಈ ನಿಟ್ಟಿನಲ್ಲಿ ಕಳೆದ ಬಾರಿ ಬ್ರಹ್ಮರಥ ಸೇವೆಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಅನ್ನಬ್ರಹ್ಮನ ಯಜ್ಞ ಸೇವೆಗೆ ಅವಕಾಶ ನೀಡಲಾಗಿದೆ. ಹಾಗಾಗಿ ಭಕ್ತರ ಸೇವೆಯಿಂದಲೇ ಅನ್ನಪ್ರಸಾದ ವಿತರಣೆ ನಡೆಯುವ ಉದ್ದೇಶದಿಂದ ಅನ್ನದಾಸೋಹದ ರಶೀದಿಯನ್ನು ಮಾಡಲಾಗಿದೆ. ಭಕ್ತರು ಸಹಕರಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.