2023-24ನೇ ಶೈಕ್ಷಣಿಕ ಸಾಲಿನ ಶಾಲಾ ವೇಳಾಪಟ್ಟಿ ಪ್ರಕಟ; ಮೇ.29ರಿಂದ ಶಾಲೆಗಳು ಆರಂಭ, ಅ.8ರಿಂದ 24 ಮಧ್ಯಂತರ ರಜೆ

0

ಪುತ್ತೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2023 -24 ನೇ ಶೈಕ್ಷಣಿಕ ಸಾಲಿನ ಶಾಲಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತರಗತಿಗಳು ಮೇ.29ರಿಂದ ಆರಂಭವಾಗಲಿವೆ.

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ಮೇ.29ರಿಂದ ಅಕ್ಟೋಬರ್ 7ರವರಗೆ 2023-24ನೇ ಸಾಲಿನ ಮೊದಲನೇ ಶೈಕ್ಷಣಿಕ ಅವಧಿ ನಡೆಯಲಿದೆ. ಅಕ್ಟೋಬರ್ 25ರಿಂದ ಎರಡನೇ ಶೈಕ್ಷಣಿಕ ಅವಧಿಯು ಆರಂಭವಾಗಿ 2024ರ ಏಪ್ರಿಲ್ 10ಕ್ಕೆ ಮುಕ್ತಾಯವಾಗಲಿದೆ. 2023ರ ಅಕ್ಟೋಬರ್ 8ರಿಂದ ಅಕ್ಟೋಬರ್ 24ರವರೆಗೆ ಮಧ್ಯಂತರ ರಜೆ ಇರಲಿದೆ. 2024ರ ಏಪ್ರಿಲ್ 11ರಿಂದ ಮೇ.28ರವರೆಗೆ ಬೇಸಿಗೆ ರಜೆ ನೀಡಲಾಗಿದೆ.

LEAVE A REPLY

Please enter your comment!
Please enter your name here