ಚಿತ್ರ ಬರಹ:ಕುಮಾರ್ ಪೆರ್ನಾಜೆ ಪುತ್ತೂರು
ಪುತ್ತೂರು : ಈ ಬೀರು ಬೇಸಿಗೆಯಲ್ಲಿ ಪ್ರಕೃತಿಯಲ್ಲಿ ಕುಡಿಯಲು ನೀರಿನ ತೀವ್ರ ಕೊರತೆಯಿಂದ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೀಡಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಂದಳಿಕೆಯ ಸಿರಿ ಜಾತ್ರೆಯ ಪ್ರಚಾರಕ್ಕೆ ಹೊಸ ಉಪಾಯವನ್ನು ಮಾಡಲಾಗಿದೆ ಜಾತ್ರೆಯ ಆಹ್ವಾನವನ್ನು ಮುದ್ರಿಸಿದ ಕಂಬದ ಮಾದರಿಯ ರಟ್ಟಿನ ಪೆಟ್ಟಿಗೆಯ ಮೇಲೆ ಮಣ್ಣಿನ ಪಾತ್ರೆಯನ್ನು ಇಟ್ಟು ಅದನ್ನು ರಸ್ತೆ ಪಕ್ಕದಲ್ಲಿಟ್ಟು ಅಥವಾ ಮರಕ್ಕೆ ನೇತು ಹಾಕಿ ಅದರಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯುವುದಕ್ಕೆ ನೀಡುವ ಪ್ರಯೋಗವನ್ನು ಕೈಗೊಳ್ಳಲಾಗಿದೆ.
ಈ ಹಿಂದಿನ ವರ್ಷಗಳಲ್ಲಿ ನಂದಳಿಕೆ ಸಿರಿ ಜಾತ್ರೆಯ ಸಂದರ್ಭದಲ್ಲಿ ರಟ್ಟಿನಿಂದ ಮಾಡಿದ ಮೈಲುಗಲ್ಲು ,ಅಂಚೆ ಕಾರ್ಡ್ ಮಾದರಿಯ ಪೋಸ್ಟರ್ ,ಬಣ್ಣದ ಛತ್ರಿಗಳು, ಮಾವಿನ ಎಲೆ, ಗೋಣಿಚೀಲ ,ಬಟ್ಟೆಯ ಬೃಹತ್ ಮಾಸ್ಕ್, ಫೋಟೋ ಫ್ರೇಮ್ ಇತ್ಯಾದಿಗಳ ಮೇಲೆ ಜನರು ಜಾತ್ರೆಗೆ ಬರುವಂತೆ ಆಹ್ವಾನವನ್ನು ಮುದ್ರಿಸಲಾಗಿತ್ತು.
ಉಡುಪಿ, ದ.ಕ, ಚಿಕ್ಕಮಂಗಳೂರು ಶಿವಮೊಗ್ಗ ಜಿಲ್ಲೆಗಳ ಧರ್ಮಸ್ಥಳ, ಚಾರ್ಮಾಡಿ, ಉಜಿರೆ ಕುಂದಾಪುರ ,ತೀರ್ಥಹಳ್ಳಿ ಹಾಗೂ ಮಾಲೆನಾಡಿನ ಮನೆಗಳ ಮುಂಭಾಗದಲ್ಲಿ ಈ ಬಾರಿ ಪರಿಸರ ಜಾಗೃತಿಗೆ ಗೊತ್ತು ನೀಡಲಾಗಿದೆ.ಪ್ರತಿವರ್ಷ ಅಚ್ಚರಿ ಮೂಡಿಸುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಿರಿ ಜಾತ್ರೆಯ ಪ್ರಚಾರ ಫಲಕ ವಾಹ್ ಸೂಪರ್ ಐಡಿಯಾ..! ಎಂಬಂತಿದೆ. ಈ ರೀತಿ ಮಾಡುವುದರಿಂದ ಪ್ರಾಣಿ ಪಕ್ಷಿಗಳ ಉಳಿವಿಕೆಗೆ ಎಲ್ಲರೂ ಕೈಜೋಡಿಸಿದರೆ ಏನು ಕಷ್ಟವಿಲ್ಲ. ಹಿಂದೆ ದಾರಿ ಬದಿಗಳಲ್ಲಿ ಪ್ರಾಣಿ, ವಿಶೇಷವಾಗಿ ದನಗಳಿಗೆ ನೀರು ಇಡುವ ಸಂಪ್ರದಾಯವಿತ್ತು. ಈಗ ನಳ್ಳಿ ಬಂದಾಗ ಅದೆಲ್ಲ ಮಾಯವಾಗಿದೆ.
ಮತ್ತೆ ಇದನ್ನು ನಿಮ್ಮ ಮನೆಯ ಮುಂದೆ ಹಿತ್ತಲಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಅವಶ್ಯಕತೆ ಇದೆ. ಇದರಿಂದ ಆಳಿ ಉಳಿವು ಕಾಣದ ಕೈಗಳು ನಿಮ್ಮನ್ನು ಅಸ್ತು ಎನ್ನುವುದರಲ್ಲಿ ಸಂಶಯವಿಲ್ಲ.
ಈ ಬಾರಿ ಅಂಗಡಿ ಹೋಟೆಲ್ ಮನೆಗಳ ಮುಂದೆ ಸಾವಿರಾರು ಸಂಖ್ಯೆಯಲ್ಲಿ ರಸ್ತೆಗಳ ಪಕ್ಕದಲ್ಲಿ ಇಡಲಾಗುತ್ತಿದ್ದು ಅಲ್ಲಿನ ಜನರಿಗೆ ಈ ಮಣ್ಣಿನ ಪಾತ್ರೆಯಲ್ಲಿ ನಿತ್ಯ ನೀರು ತುಂಬಿಸಲು ವಿನಂತಿಸಲಾಗಿದೆ ಈ ಬಾರಿಯ ವಿನೂತನ ಬಾಕ್ಸ್ ಪರಿಸರ ಸ್ನೇಹಿ ಜಾತ್ರೆ ಉದ್ದೇಶ ಈ ಮೂಲಕ ಜಾತ್ರೆ ಹಾಗೂ ಪರಿಸರ ಕಾಳಜಿ ಬಗ್ಗೆ ಪ್ರಯಾಣಿಕರ ಹಾಗೂ ಭಕ್ತರ ಮನಸೆಳೆದಿದ್ದಾರೆ. ಹೀಗೊಂದು ಸಂದೇಶ.!!