ಭರತನಾಟ್ಯ ಪರೀಕ್ಷೆ: ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರಕ್ಕೆ ಶೇ.100 ಫಲಿತಾಂಶ

0

ಇಬ್ಬರು ಅಂತಿಮ ವಿದ್ವತ್ ತೇರ್ಗಡೆ, ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಸುಬ್ರಹ್ಮಣ್ಯ ಶಾಖೆಗಳಲ್ಲಿ ಉನ್ನತ ಶ್ರೇಣಿ ಫಲಿತಾಂಶ

ಪುತ್ತೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಪರೀಕ್ಷೆಯಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದಿಂದ ಪರೀಕ್ಷೆಗೆ ಹಾಜರಾದ ಎಲ್ಲಾ 41 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.100 ಫಲಿತಾಂಶ ದಾಖಲಿಸಿದೆ. ಈ ಸಂಸ್ಥೆ ಕಳೆದ 16 ವರ್ಷಗಳಿಂದ ನಿರಂತರ ಶೇ.100 ಫಲಿತಾಂಶ ದಾಖಲಿಸಿದೆ. ಭರತನಾಟ್ಯ ಅಂತಿಮ ವಿದ್ವತ್‌ನಲ್ಲಿ ಇಬ್ಬರು ಪ್ರಥಮ ಹಾಗೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪುತ್ತೂರಿನ ಪ್ರಧಾನ ಶಾಖೆಯಲ್ಲಿ ಜೂನಿಯರ್ ವಿಭಾಗದಲ್ಲಿ ಏಳು ಮಂದಿಯಲ್ಲಿ ಆರು ಮಂದಿ ಉನ್ನತ ಶ್ರೇಣಿ, ಒಬ್ಬರು ಪ್ರಥಮ, ಸೀನಿಯರ್‌ನಲ್ಲಿ ಐವರಲ್ಲಿ ನಾಲ್ವರು ಉನ್ನತ ಶ್ರೇಣಿ, ಒಬ್ಬರು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.

ಉಪ್ಪಿನಂಗಡಿ ಶಾಖೆಯಲ್ಲಿ ಜೂನಿಯರ್‌ನಲ್ಲಿ ಮೂವರಲ್ಲಿ ತಲಾ ಒಬ್ಬರು ಉನ್ನತ ಶ್ರೇಣಿ, ಪ್ರಥಮ ಹಾಗೂ ದ್ವಿತೀಯ, ಸೀನಿಯರ್‌ನಲ್ಲಿ ನಾಲ್ವರಲ್ಲಿ ಒಬ್ಬರು ಉನ್ನತ ಶ್ರೇಣಿ, ಮೂರು ಮಂದಿ ಪ್ರಥಮ ತೇರ್ಗಡೆಯಾಗಿದ್ದಾರೆ. ವಿಟ್ಲ ಶಾಖೆಯಲ್ಲಿ ಜೂನಿಯರ್‌ನಲ್ಲಿ 12 ಮಂದಿ ಪೈಕಿ 10 ಮಂದಿ ಉನ್ನತ ಶ್ರೇಣಿ, ತಲಾ ಒಬ್ಬರು ಪ್ರಥಮ ಹಾಗೂ ದ್ವಿತೀಯ, ಸೀನಿಯರ್‌ನಲ್ಲಿ ಇಬ್ಬರು ಕೂಡ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸುಬ್ರಹ್ಮಣ್ಯ ಶಾಖೆಯಲ್ಲಿ ಜೂನಿಯರ್‌ನಲ್ಲಿ ಐವರಲ್ಲಿ ನಾಲ್ವರು ಉನ್ನತ ಶ್ರೇಣಿ, ಒಬ್ಬರು ಪ್ರಥಮ ಸ್ಥಾನ, ಸೀನಿಯರ್‌ನಲ್ಲಿ
ಒಬ್ಬಾಕೆ ಉನ್ನತ ಶ್ರೇಣಿ ಫಲಿತಾಂಶ ಪಡೆದಿದ್ದಾರೆ.

ಶ್ರದ್ಧಾ, ಶ್ರೇಯಾಗೆ ವಿದುಷಿ ಪದವಿ:
ಭರತನಾಟ್ಯ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಪುತ್ತೂರಿನ ಶ್ರದ್ಧಾ ಬಿ. ಪ್ರಥಮ ಹಾಗೂ ಶಾಂತಿಗೋಡಿನ ಶ್ರೇಯಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರದ್ಧಾ ಅವರು ದರ್ಬೆಯ ಸುಗಮ ತರಕಾರಿ ಸ್ಟೋರ್ಸ್ ಮಾಲೀಕ ಗೋಪಾಲಕೃಷ್ಣ ಭಟ್ ಮತ್ತು ಪಾರ್ವತಿ ದಂಪತಿಯ ಪುತ್ರಿ, ಶ್ರೇಯಾ ಅವರು ಕೃಷಿಕ ಉದಯಶಂಕರ ಭಟ್ ಮತ್ತು ಲಕ್ಷ್ಮಿ ದಂಪತಿ ಪುತ್ರಿ. ಇವರಿಬ್ಬರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಅಂತಿಮ ಬಿಎಸ್‌ಸಿ ವಿದ್ಯಾರ್ಥಿಯಾಗಿದ್ದಾರೆ.

ಪುತ್ತೂರಿನ ಪ್ರಧಾನ ಶಾಖೆಯಲ್ಲಿ ಜೂನಿಯರ್‌ನಲ್ಲಿ ಗಹನಾ ಎ.ಬಿ, ಶ್ರಾವಣಿ ವಿ.ಎಸ್, ಹಸ್ತಾ ಜಿ., ಧನ್ವಿ ರೈ ಕೆ, ಮೋಕ್ಷ ಕೆ, ಅವಿಷಿ ಎಸ್.ವಿ. ಉನ್ನತ ಶ್ರೇಣಿ ಹಾಗೂ ಅವನಿ ಎಸ್.ವಿ. ಪ್ರಥಮ ಶ್ರೇಣಿ ಪಡೆದಿದ್ದಾರೆ.

ಸೀನಿಯರ್‌ನಲ್ಲಿ ಅನುಶ್ರೀ, ಭುವಿ ಕೆ.ಜಿ, ವೈಷ್ಣವಿ ವಿ.ಪಿ ಹಾಗೂ ಪ್ರವೀನ್ ಆರ್.ಭಟ್ಟ ಬ್ರಹ್ಮಾವರ ಇವರು ಉನ್ನತ ಶ್ರೇಣಿ ಹಾಗೂ ಶ್ರೀರಕ್ಷಾ ಪ್ರಥಮ ಶ್ರೇಣಿ ದಾಖಲಿಸಿದ್ದಾರೆ. ‌

ಉಪ್ಪಿನಂಗಡಿ ಶಾಖೆಯಲ್ಲಿ ಜೂನಿಯರ್‌ನಲ್ಲಿ ಆಸರೆ ಎ.ವಿ ಉನ್ನತ ಶ್ರೇಣಿ, ಜನನಿ ಪಿ. ಪ್ರಥಮ, ಗಣಿಕಾ ಶೆಟ್ಟಿ ದ್ವಿತೀಯ, ಸೀನಿಯರ್‌ನಲ್ಲಿ ಅನು ಸಾಲ್ಯಾನ್ ಉನ್ನತ ಶ್ರೇಣಿ, ಪಿ.ಎನ್.ಪ್ರತಿಕ್ ಗೌಡ, ನೇತ್ರಶ್ರೀ ಪಿ.ಎಂ. ಹಾಗೂ ಎಸ್.ಎ.ದೀಕ್ಷಿತಾ ಪ್ರಥಮ ಶ್ರೇಣಿ ಪಡೆದಿದ್ದಾರೆ. ‌

ವಿಟ್ಲ ಶಾಖೆಯಲ್ಲಿ ಜೂನಿಯರ್‌ನಲ್ಲಿ ಅದ್ವೈತ, ಅಂಕಿತ ಬಿ.ಆರ್, ಚಿನ್ಮಯಿ ಜಿ.ಆರ್, ದ್ವಿಶಾ, ಮನಸ್ವಿ ಆರ್.ಕೆ., ಪ್ರತೀಕ್ಷಾ ಎಂ, ಸಂಹಿತಾ ಎನ್, ಸಂಹಿತಾ ಲಕ್ಷ್ಮಿ, ವಂಧ್ಯಾ ಹಾಗೂ ಶ್ರೇಯಾ ಉನ್ನತ ಶ್ರೇಣಿ, ಬಿ.ಅನಘ ಪ್ರಥಮ ಹಾಗೂ ಸಾನ್ವಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಸೀನಿಯರ್‌ನಲ್ಲಿ ಧನ್ಯಶ್ರೀ ಬಿ. ಹಾಗೂ ಮನೋನ್ಮಯಿ ಕೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸುಬ್ರಹ್ಮಣ್ಯ ಶಾಖೆಯಲ್ಲಿ ಜೂನಿಯರ್‌ನಲ್ಲಿ ಕಾವ್ಯಶ್ರೀ ಬಿ, ಶ್ರೀಮಾ ಎನ್.ಬಿ., ಸವಿತ ಯು.ಕೆ, ಶೃತಿಪ್ರಿಯಾ ಉನ್ನತ ಶ್ರೇಣಿ, ಪಂಚಮಿ ಎನ್.ಬಿ. ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಸೀನಿಯರ್‌ನಲ್ಲಿ ವರ್ಷಾ ಬೇಕಲ್ ಜೆ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಕಲಾಕೇಂದ್ರದ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here