ಬ್ರಾಂಡೆಡ್ ಡ್ರೆಸ್ ಪ್ರಿಯರಿಗೆ ಸಂತಸದ ಸುದ್ದಿ; ಪುತ್ತೂರು ಜಿ.ಎಲ್. ವನ್ ಮಾಲ್‌ನಲ್ಲಿ ಮೆನ್ ಮಲ್ಟಿ ಬ್ರಾಂಡೆಡ್ ಡ್ರೆಸ್ ಶೋರೂಂ `WHITE TAG’ ಶುಭಾರಂಭ

0

ಪುತ್ತೂರು: ಕಾಸರಗೋಡು ಹಾಗೂ ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಪುರುಷರ ಸಿದ್ದ ಉಡುಪುಗಳ ಮಲ್ಟಿ ಬ್ರಾಂಡೆಡ್ ಶೋರೂಂ ‘ವೈಟ್ ಟ್ಯಾಗ್’ ಎ.1ರಂದು ಪುತ್ತೂರು ಜಿ.ಎಲ್. ವನ್ ಮಾಲ್‌ನಲ್ಲಿ ಶುಭಾರಂಭಗೊಂಡಿತು.

ನೂತನ ಶೋರೂಂನ್ನು ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಳ್ ಪುತ್ತೂರು ಉದ್ಘಾಟಿಸಿ ದುವಾ ನೆರವೇರಿಸಿ ಶುಭ ಹಾರೈಸಿದರು.

ವೈಟ್ ಟ್ಯಾಗ್ ನೂರಕ್ಕೆ ನೂರು ಯಶಸ್ವಿ-ಬಲರಾಮ್ ಆಚಾರ್ಯ : ಜಿ.ಎಲ್ ಸಮೂಹ ಸಂಸ್ಥೆಗಳ ಚೇರ್‌ಮೆನ್ ಜಿ.ಎಲ್ ಬಲರಾಮ್ ಆಚಾರ್ಯ ಮಾತನಾಡಿ ಸುಸಜ್ಜಿತವಾಗಿರುವ ವೈಟ್ ಟ್ಯಾಗ್ ಬ್ರಾಂಡೆಡ್ ಡ್ರೆಸ್ ಶೋರೂಂ ಜಿ.ಎಲ್ ಮಾಲ್‌ನಲ್ಲಿ ಶುಭಾರಂಭಗೊಂಡಿರುವುದು ಬಹಳ ಸಂತೋಷ ತಂದಿದೆ. ಈ ಶೋರೂಂನಲ್ಲಿ ತುಂಬ ಕಂಪೆನಿಗಳ ಡ್ರೆಸ್ ಸಂಗ್ರಹ ಇದೆ. ಇದು ನೂರಕ್ಕೆ ನೂರು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿ ಶುಭ ಹಾರೈಸಿದರು.

ಮಂಗಳೂರಿಗೆ ಹೋಗುವ ಅಗತ್ಯವಿಲ್ಲ-ಎಲ್.ಟಿ ರಝಾಕ್ ಹಾಜಿ: ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ರಝಾಕ್ ಹಾಜಿ ಮಾತನಾಡಿ ಜಿ.ಎಲ್ ವನ್ ಮಾಲ್ ಪುತ್ತೂರಿನಲ್ಲಿ ಮಾಡುವ ಮೂಲಕ ಬಲರಾಮ್ ಆಚಾರ್ಯ ಅವರು ಪುತ್ತೂರಿನ ಸೌಂದರ್ಯವನ್ನು ಹೆಚ್ಚಿಸಿದ್ದು ಇದರಿಂದ ಹಲವರಿಗೆ ಉದ್ಯೋಗವೂ ಲಭಿಸಿದಂತಾಗಿದೆ. ವೈಟ್ ಟ್ಯಾಗ್‌ನಂತಹ ಬ್ರಾಂಡೆಡ್ ಡ್ರೆಸ್ ಮಳಿಗೆ ಈ ಮಾಲ್‌ನಲ್ಲಿ ಪ್ರಾರಂಭಗೊಂಡಿರುವುದರಿಂದ ಇನ್ನು ಮಂಗಳೂರಿಗೆ ಹೋಗುವ ಅಗತ್ಯವಿಲ್ಲ, ಪುತ್ತೂರಿನಲ್ಲೇ ಎಲ್ಲವೂ ಸಿಗಲಿದೆ ಎಂದು ಹೇಳಿದರು.

ನಾವೆಲ್ಲಾ ಸಹಕಾರ ನೀಡಬೇಕು-ಎಂ.ಎಸ್ ಮುಹಮ್ಮದ್: ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮುಹಮ್ಮದ್ ಮಾತನಾಡಿ ಪುತ್ತೂರಿನಲ್ಲಿ ಶುಭಾರಂಭಗೊಂಡ ವೈಟ್ ಟ್ಯಾಗ್ ಬ್ರಾಂಡೆಡ್ ಡ್ರೆಸ್ ಶೋರೂಂನಿಂದ ಡ್ರೆಸ್ ಖರೀದಿಸುವ ಮೂಲಕ ನಾವೆಲ್ಲಾ ಸಹಕಾರ ನೀಡಬೇಕು. ಬಶೀರ್ ಇಂದ್ರಾಜೆಯವರ ಕನಸು ನನಸಾಗಬೇಕು ಮತ್ತು ಮುಂದಿನ ದಿನಗಳಲ್ಲಿ ಈ ಶೋರೂಂ ವಿವಿಧ ತಾಲೂಕುಗಳಲ್ಲಿ ಪ್ರಾರಂಭವಾಗಬೇಕು ಎಂದು ಹೇಳಿದರು. ಜಿ.ಎಲ್ ಒನ್ ಮಾಲ್ ಪುತ್ತೂರಿನ ಅಭಿವೃದ್ಧಿಗೆ ಇನ್ನೊಂದು ಕೊಡುಗೆಯಾಗಿದೆ ಎಂದೂ ಎಂ.ಎಸ್ ಮುಹಮ್ಮದ್ ಹೇಳಿದರು.

ಯಶಸ್ಸಿನ ಪಥದಲ್ಲಿ ಸಾಗಲಿ-ಎಂ.ಬಿ ವಿಶ್ವನಾಥ ರೈ: ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎಂ.ಬಿ ವಿಶ್ವನಾಥ ರೈ ಮಾತನಾಡಿ ಜಿ.ಎಲ್. ವನ್ ಮಾಲ್‌ನಲ್ಲಿ ಶುಭಾರಂಭಗೊಂಡಿರುವ ವೈಟ್ ಟ್ಯಾಗ್ ಮಲ್ಟಿ ಬ್ರಾಂಡೆಡ್ ಡ್ರೆಸ್ ಮಳಿಗೆ ಯಶಸ್ಸಿನ ಪಥದಲ್ಲಿ ಸಾಗಲಿ, ಗ್ರಾಹಕರಿಗೆ ಒಳ್ಳೆಯ ಸೇವೆ ಸಿಗಲಿ ಎಂದು ಆಶಿಸಿದರು.

ಪ್ರಾಮಾಣಿಕ ವ್ಯವಹಾರದಿಂದ ಉದ್ಯಮ ಯಶಸ್ಸು-ಅರಿಯಡ್ಕ ಹಾಜಿ : ಒಳಮೊಗ್ರು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ಪ್ರಾಮಾಣಿಕ ವ್ಯವಹಾರದಿಂದ ಉದ್ಯಮದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಜಿ.ಎಲ್ ವನ್ ಮಾಲ್‌ನಲ್ಲಿ ಶುಭಾರಂಭಗೊಂಡಿರುವ ವೈಟ್ ಟ್ಯಾಗ್ ಬ್ರಾಂಡೆಡ್ ಡ್ರೆಸ್ ಮಳಿಗೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ನಗರಸಭಾ ಸದಸ್ಯ ಎಚ್ ಮಹಮ್ಮದ್ ಆಲಿ ಶುಭ ಹಾರೈಸಿದರು. ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು.

ಪ್ರಥಮ ಖರೀದಿ: ವೈಟ್ ಟ್ಯಾಗ್ ಡ್ರೆಸ್ ಮಳಿಗೆಯಿಂದ ಜಿ.ಎಲ್. ವನ್ ಮಾಲ್‌ನ ಮಾಲಕರಾದ ಜಿ.ಎಲ್ ಬಲರಾಮ್ ಆಚಾರ್ಯ ಅವರು ಪ್ರಥಮ ಖರೀದಿ ಮಾಡಿ ವೈಟ್ ಟ್ಯಾಗ್‌ನ ಮಾಲಕ ಬಶೀರ್ ಇಂದ್ರಾಜೆಯವರಿಂದ ಉಡುಪನ್ನು ಸ್ವೀಕರಿಸಿದರು. ನಂತರ ಅನೇಕ ಅತಿಥಿಗಳು ಕೂಡಾ ಡ್ರೆಸ್ ಖರೀದಿ ಮಾಡಿದರು.

ಉದ್ಯಮಿ ರಫೀಕ್ ದರ್ಬೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಇಫ್ತಾರ್ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸ್ಟೋರ್ ಮ್ಯಾನೇಜರ್ ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು.

10% ಆಫರ್..!

ಶುಭಾರಂಭದ ಪ್ರಯುಕ್ತ ಸೀಮಿತ ಅವಧಿಯ ಆಫರ್ ಪ್ರಕಟಿಸಲಾಗಿದ್ದು 10% ಆಫರ್ ನೀಡಲಾಗಿದೆ ಎ.2ರಂದು ಆಫರ್ ಪ್ರಾರಂಭಗೊಂಡಿದ್ದು ಎ.9ರ ವರೆಗೆ ಈ ಆಫರ್ ಇರಲಿದೆ ಎಂದು ವೈಟ್ ಟ್ಯಾಗ್ ಶೋರೂಂ ಮ್ಯಾನೇಜರ್ ಪ್ರಶಾಂತ್ ತಿಳಿಸಿದ್ದಾರೆ.

ವಿವಿಧ ಕಂಪೆನಿಗಳ ಡ್ರೆಸ್ ಲಭ್ಯ : ‘ವೈಟ್ ಟ್ಯಾಗ್’ ಡ್ರೆಸ್ ಶೋರೂಂ ಪುರುಷರ ಮಲ್ಟಿ ಬ್ರಾಂಡೆಡ್ ಶೋರೂಮ್ ಆಗಿದ್ದು ಕ್ಲಬ್‌ಸ್ಟೋನ್, ಬ್ಲಾಕ್‌ಬೆಬೆರೀಸ್, ಹೈಬೆರಿಲ್, ಪೀಟರ್ ಇಂಗ್ಲಂಡ್, ಸೀನಿಯರ್, ರಾಸ್ಟಾರ್, ಪಾನ್‌ಅಮೇರಿಕಾ, ಅಟೆಲಿಯರ್, ಫ್ರಿಯೋ, ಇಂಡಿಯನ್ ಟೆರೈನ್, ಯುಥೋಪಿಯ, ಪಾರ್ಕ್ಸ್, ಫೆಟೆ, ಐರಿಶ್ ಬ್ಲೂ, ರಿವರ್ ಬ್ಲೂ, ರಾಮ್‌ರಾಜ್, ಪಾರ್ಕ್ ಅವೆನ್ಯೂ, ಫ್ಲೈಯಿಂಗ್ ಮೆಶಿನ್, ಹೆನೀಸ್, ಪೀಟರ್‌ಮೆನ್, ಯುನಿಬ್ರೊ, ಸೇರಿದಂತೆ ವಿವಿಧ ಬ್ರಾಂಡೆಡ್ ಕಂಪೆನಿಗಳ ಪುರುಷರ ಉಡುಪುಗಳು ಲಭ್ಯವಿದೆ. ಶೋರೂಮ್‌ನಲ್ಲಿ ವಿಶಾಲ ಸ್ಥಳಾವಕಾಶವಿದ್ದು ಗ್ರಾಹಕರಿಗೆ ಖರೀದಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ +918296090426, +918251470591 ಮೊಬೈಲ್ ನಂಬರ್‌ನ್ನು ಸಂಪರ್ಕಿಸಬಹುದಾಗಿದೆ.

ವೈಟ್ ಟ್ಯಾಗ್ 3ನೇ ಶೋರೂಂ:
ಪುತ್ತೂರಿನ ಜಿ.ಎಲ್ ಒನ್ ಮಾಲ್‌ನಲ್ಲಿ ಮಲ್ಟಿ ಬ್ರಾಂಡೆಡ್ ಶೋರೂಂ ವೈಟ್ ಟ್ಯಾಗ್ 3ನೇ ಶೋರೂಂನ್ನು ತೆರೆದಿದ್ದೇವೆ. ಈಗಾಗಲೇ ನಮ್ಮ ಶೋರೂಂ ಕಾಸರಗೋಡು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿದ್ದು ಗ್ರಾಹಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಇಲ್ಲಿ ಶುಭಾರಂಭಗೊಂಡಿರುವ ವೈಟ್ ಟ್ಯಾಗ್ ಶೋರೂಂನಲ್ಲಿ ಅನೇಕ ಕಂಪೆನಿಗಳ ಪುರುಷರ ಬ್ರಾಂಡೆಡ್ ಉಡುಪುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಗ್ರಾಹಕರ ಸಹಕಾರವನ್ನು ಬಯಸುತ್ತಿದ್ದೇವೆ.
-ಬಶೀರ್ ಇಂದ್ರಾಜೆ, ಮಾಲಕರು ವೈಟ್ ಟ್ಯಾಗ್ ಡ್ರೆಸ್ ಶೋರೂಂ

LEAVE A REPLY

Please enter your comment!
Please enter your name here