ಉಪ್ಪಿನಂಗಡಿ: ಎಳವೆಯಲ್ಲಿ ನೀಡುವ ಸಂಸ್ಕಾರ ಮಕ್ಕಳನ್ನು ಸಮಾಜಕ್ಕೆ ಸಂಪತ್ತಾಗಿ ರೂಪಿಸಲು ಸಹಕಾರಿಯಾಗಬಲ್ಲದು. ಮಕ್ಕಳಿಗಾಗಿ ಸಂಪತ್ತನ್ನು ಕೂಡಿಡುವ ಬದಲು ಮಕ್ಕಳನ್ನೇ ಸಂಪತ್ತಾನ್ನಾಗಿಸಲು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಿ. ಈ ಮೂಲಕ ನಮ್ಮ ನಮ್ಮ ಮನೆ ಮತ್ತು ಸಮಾಜವನ್ನು ಬೆಳಗಿಸಲು ಕ್ಕೆ ಜೋಡಿಸೋಣ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ ಕೃಷ್ಣ ಭಟ್ ಕರೆ ನೀಡಿದರು.
ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಮಾತೃ ಪಾದ ಪೂಜನಾ, ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಮತ್ತು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ತಾಯಿ ಮತ್ತು ಮಕ್ಕಳ ಸಂಬಂಧವೇ ದೃಢ ಸಮಾಜದ ಬುನಾದಿ. ಈ ಸಂಬಂಧದ ಮಹತ್ವವನ್ನು ಸಾರುವ ಮಾತೃ ಪಾದ ಪೂಜನಾ ಕಾರ್ಯಕ್ರಮ ಮಗುವಿನ ಬಾಳ ಭವಿಷ್ಯದಲ್ಲಿ ಉಜ್ವಲ ಪರಿಣಾಮ ಬೀರಲಿದೆ ಎಂದರು.
ಉಪ್ಪಿನಂಗಡಿ ರೋಟರಿ ಅಧ್ಯಕ್ಷ ಜಗದೀಶ್ ನಾಯಕ್ ಜಿ.ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶ್ರೀಮತಿ ಹರಿಣಿ ಕೆ., ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಧನಂಜಯ ಕುಮಾರ್ ನಟ್ಟಿಬೈಲ್, ಶಿಶು ಮಂದಿರ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ, ಕಾರ್ಯಕ್ರಮ ಸಂಚಾಲಕ ಕಂಗ್ವೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು. ಕೇಂದ್ರ ಗೃಹಮಂತ್ರಾಲಯದಿಂದ ಕಂಚಿನ ಪದಕ ಪುರಸ್ಕೃತ ಗೃಹ ರಕ್ಷಕ ದಳ ಉಪ್ಪಿನಂಗಡಿ ಘಟಕದ ಘಟಕಾಧಿಕಾರಿ ದಿನೇಶ್ ಬಿ., ಬುಕ್ ಆಫ್ ಇಂಡಿಯಾ ರೆಕಾರ್ಡ್‌ನಲ್ಲಿ ದಾಖಲೆ ಬರೆದ ಬಾಲೆ ಸದ್ವಿತಾ ಬಿರಾದಾರ್, ಎಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಕಲಿತು ೬ನೇ ರ್‍ಯಾಂಕ್ ವಿಜೇತ ಶಿಶಿರ್ ಎಸ್. ದೇವಾಡಿಗ, ಎಂಕಾಂ ಪದವಿಯಲ್ಲಿ ನಾಲ್ಕನೇ ರ್‍ಯಾಂಕ್ ವಿಜೇತೆ ಶ್ರೀ ಲಕ್ಷ್ಮೀ ಭಟ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಹಾಗೂ ವಿವಿಧ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಪರಿಗಣಿಸಿ ಗ್ರಾ.ಪಂ.ನ ಧನಂಜಯ್ ಕುಮಾರ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಯು.ಜಿ. ರಾಧ, ಶ್ಯಾಮಲಾ ಶೆಣೈ, ಜ್ಯೋತಿ ಹೇರಂಭ ಶಾಸ್ತ್ರಿ, ಸುಧಾಕರ ಶೆಟ್ಟಿ, ರಮೇಶ್ ನಟ್ಟಿಬೈಲು, ಬಿ.ಕೆ. ಆನಂದ, ಜಯಂತ ಪೊರೋಳಿ, ಎನ್. ಉಮೇಶ್ ಶೆಣೈ, ಶಶಿಕಲಾ ಭಾಸ್ಕರ್, ಸುಧೀರ್, ಕೃಷ್ಣ ಪ್ರಸಾದ್ ದೇವಾಡಿಗ, ವೆಂಕಪ್ಪ ಗೌಡ, ಜಯಶ್ರೀ ಜನಾರ್ದನ್, ಸುಜಾತ ಕೃಷ್ಣ ಆಚಾರ್ಯ, ಹರಿರಾಮಚಂದ್ರ, ಕೈಲಾರ್ ರಾಜಗೋಪಾಲ ಭಟ್, ಹರಿಣಾಕ್ಷಿ, ಪುಷ್ಪಲತಾ ಜನಾರ್ದನ್, ಸುಗಂಧಿ, ಕರಾಯ ರಾಘವೇಂದ್ರ ನಾಯಕ್, ಸುಬ್ರಹ್ಮಣ್ಯ ಶೆಣೈ, ಕೆ. ಜಗದೀಶ್ ಶೆಟ್ಟಿ, ಯು. ರಾಜೇಶ್ ಪೈ, ಯತೀಶ್ ಶೆಟ್ಟಿ, ಮಹಾಲಿಂಗ, ಶ್ರೀಕಾಂತ್ ಭಟ್, ಶರತ್ ಕೋಟೆ, ಶಶಿಧರ್ ಶೆಟ್ಟಿ, ಸಂದೇಶ್, ಮೋಹಿನಿ, ಕೃಷ್ಣಪ್ಪ ನಂದಿನಿ ನಗರ, ರಾಮಣ್ಣ ಸಪಲ್ಯ, ವಿಶ್ವನಾಥ್ ಟೈಲರ್, ಕಿಶೋರ್ ಕುಮಾರ್, ಅಕ್ಷಯ್ ಕುಮಾರ್, ದೇವರಾಜ್, ವಿನೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ, ಕಾಂತಿಮಣಿ , ಹಾಗೂ ಚಂದ್ರಾವತಿ ರವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.