





ಪುತ್ತೂರು: ಬನ್ನೂರು ಅಯೋಧ್ಯಾ ನಗರದಲ್ಲಿರುವ ಶಿವಪಾರ್ವತಿ ಮಂದಿರ ಮತ್ತು ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಪುತ್ತೂರಿನಲ್ಲಿ ಪ್ರಥಮ ಭಾರಿಗೆ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಆರಂಭಗೊಂಡಿತು.


ಶಿಬಿರವನ್ನು ರಾಜೇಶ್ ಬನ್ನೂರ್ ಉದ್ಘಾಟಿಸಿ ಶುಭಹಾರೈಸಿದರು. ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ್ ಗೌಡರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಪಾರ್ವತಿ ಮಂದಿರದ ಗೌರವಾಧ್ಯಕ್ಷರಾದ ಉದಯ ಕುಮಾರ್, ನಿವೃತ್ತ ಮೆಸ್ಕಾಂ ಇಂಜಿನಿಯರ್ ಸೇಸಪ್ಪ ಪೂಜಾರಿ ಬನ್ನೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.





ಪುತ್ತೂರಿನ ಕಲ್ಲಾರೆಯಲ್ಲಿರುವ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ನ ಪ್ರವರ್ತಕ ಕೆ. ಪ್ರಭಾಕರ್ ಸಾಲ್ಯಾನ್ ರವರು ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಪುತ್ತೂರು ನಗರಸಭೆ ಅಧ್ಯಕ್ಷ ಜೀವಂದರ್ ಜೈನ್, ಸದಸ್ಯೆ ಮೋಹಿನಿ ವಿಶ್ವನಾಥ ಗೌಡರವರು ಕಾರ್ಯಕ್ರಮಕ್ಕೆ ಆಗಮಿಸಿದರು.
ಶಿಬಿರವು ಎ.14ರ ವರೆಗೆ ಬೆಳಗ್ಗೆ 9.30ರಿಂದ ಸಾಯಂಕಾಲ 4.30ರ ವರೆಗೆ ನಡೆಯಲಿದೆ.
ಮಧುಮೇಹ, ಅಧಿಕ ರಕ್ತದೊತ್ತಡ ,ಸಂಧಿವಾತ, ವೆರಿಕೋಸ್ ವೇನ್, ಸ್ನಾಯುಸೆಳೆತ ,ಊತ, ಪಾರ್ಕಿನ್‌ಸನ್, ಸಯಾಟಿಕಾ, ಸರ್ವಿಕಲ್ ಸ್ಪಾಂಡಿಲೈಟಿಸ್, ನಿದ್ರಾಹೀನತೆ, ಥೈರಾಯಿಡ್, ಪಾರ್ಶ್ವವಾಯು ಬೆನ್ನುನೋವು, ಬೊಜ್ಜು ನಿವಾರಣೆ, ಬಿ. ಪಿ. ಶುಗರ್ ಹಾಗೂ ಇನ್ನಿತರ ಕಾಯಿಲೆಗಳಿಗೆ ಈ ಶಿಬಿರದಿಂದ ಮುಕ್ತಿಪಡೆಯಬಹುದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









