ಪಾದೆಕರ್ಯ: ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮಹಾಪೂಜೆ, ದೈವಗಳ ನೇಮೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು

0

ಬಡಗನ್ನೂರುಃ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಪಾದೆಕರ್ಯ ಇದರ ವಾರ್ಷಿಕ ಮಹಾಪೂಜೆ ಮತ್ತು ದೈವಗಳ ನೇಮೋತ್ಸವವು ಏ.1 ಮತ್ತು 2 ರಂದು ಪಾದೆಕರ್ಯ ಮನೆಯಲ್ಲಿ ನಡೆಯಿತು.

 ಏ.1ರಂದು ಬೆಳಗ್ಗೆ ಗಣಪತಿ ಹೋಮ, ನಾಗ ದೇವರಿಗೆ ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ಗಂ 6 ಕ್ಕೆ ಭಂಡಾರ ತೆಗೆಯುವುದು, ರಾತ್ರಿ  ತೊಂಡಂಗಲ್,   ಮೇಲೇರಿಗೆ  ಆಗ್ನಿ ಸ್ಪರ್ಶ, ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ  ಪೊಟ್ಟ ಭೂತದ ನೇಮ, ದೇವತೆ, ವರ್ಣಾರ ಪಂಜುರ್ಲಿ ದೈವಗಳ ನೇಮ ನಡೆಯಿತು.

ಏ 2 ರಂದು ಪ್ರಾತಃಕಾಲ ಶ್ರೀ ರಕ್ತೇಶ್ವರಿ ದೈವದ ನೇಮ ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ;

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೇಯಾ ಭಟ್ ಪಾದೆಕರ್ಯ ಇದರಿಂದ   ಭರತನಾಟ್ಯ ಕಾರ್ಯಕ್ರಮ ನಡೆಯಿತು.

ನಿರ್ಮಲಾ ಝನ್, ಬಸವರಾಜ್ ವೆನ್ಲಾಕ್,  ದಿವ್ಯ ಭಟ್ ಪಾದೆಕರ್ಯ ಮತ್ತು ಶ್ರೀಮತಿ ಮತ್ತು ಲೋಕೇಶ್ ಅಚಾರ್ಯ ಸಾಲಿಗ್ರಾಮ  ಹಾಗೂ ಭಾಗ್ಯಶ್ರೀ ಮತ್ತು ವಿಂದ್ಯಾಶ್ರೀ ಸಹೋದರಿಯರಿಂದ  ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ಜಯರಾಮ ಪೂಜಾರಿ ಗೆಣಸಿನಕುಮೇರು ಸಾಂಸ್ಕೃತಿಕ ಕಾರ್ಯಕ್ರಮವ ನಿರೂಪಣೆ ನೆರವೇರಿಸಿದರು.

ಸ್ಮರಣಿ ನೀಡಿ ಗೌರವಾರ್ಪಣೆ

ಶ್ರೀ ಕ್ಷೇತ್ರದ ನೇಮೋತ್ಸವ ಅಂಗವಾಗಿ  ಶ್ರೀ ಕೃಷ್ಣ ಯುವಕ ಮಂಡಲ ಹಾಗೂ ವಾಲಿ ಫ್ರೆಂಡ್ ಪಟ್ಟೆ ಇದರ  ಸದಸ್ಯರಿಂದ ಶ್ರಮದಾನ ನಡೆದಿತ್ತು.  ಶ್ರಮದಾನದಲ್ಲಿ ಭಾಗವಹಿದ ಎಲ್ಲಾ ಸದಸ್ಯರಿಗೂ ಮತ್ತು ಪರೋಕ್ಷವಾಗಿ ಸೇವೆ ಸಲ್ಲಿಸಿದ ಮಹನಿಯರನ್ನು  ಶ್ರೀ ಕ್ಷೇತ್ರದ ವತಿಯಿಂದ ಶ್ರೀಮತಿ ಮತ್ತು ವಿಷ್ಣುಭಟ್ ಮತ್ತು ಪುತ್ರ ಕೃಷ್ಣಾನಂದ ಕೆ.ವಿ  ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here