ಅಂಬಿಕಾ ವಿದ್ಯಾಲಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಬೇಸಿಗೆ ಶಿಬಿರ

0

ಪುತ್ತೂರು : ನಗರದ ಬಪ್ಪಳಿಗೆ ಅಂಬಿಕಾ ವಿದ್ಯಾಲಯ (ಸಿಬಿಎಸ್ ಇ )ದಲ್ಲಿ ಶೈಕ್ಷಣಿಕ ವರ್ಷ 2022-23 ರ ಬೇಸಿಗೆ ಶಿಬಿರವು ಮಾರ್ಚ್ 27 ರಿಂದ 29 ರ ವರೆಗೆ ನಡೆಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸುನೀತಾ ಶಿಬಿರ ಉದ್ಘಾಟಿಸಿದರು.

ಮೂರು ದಿನಗಳು ನಡೆದ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಧ್ಯೇಯಗಳು, ಧ್ವಜ ಕಟ್ಟುವ ವಿಧಾನ, ಧ್ವಜ ಕಟ್ಟುವಲ್ಲಿ ಬಳಸುವ ಗಂಟುಗಳ ಪರಿಚಯ ಮಾಡಿಕೊಡಲಾಯಿತು.

ಧ್ವಜ ಆರೋಹಣ, ಅವರೋಹಣದಳ ಸಭೆ ನಡೆಸುವುದರ ಬಗ್ಗೆ ಮಾಹಿತಿ ಪ್ರಾರ್ಥನೆ, ಧ್ವಜಗೀತೆ, ರಾಷ್ಟ್ರಗೀತೆ ಕುರಿತು ಅಭ್ಯಾಸ, ಧ್ವಜಸ್ಥoಭದ ಸುತ್ತಳತೆ, ಗೇ ಲೈನ್, ಟೋಗಲ್ ಕಟ್ಟುವುದರೊಂದಿಗೆ ಹೊರಾಂಗಣ ಆಟಗಳನ್ನು ನಡೆಸಲಾಯಿತು.

ಅಂದಾಜು ಗಣನೆಯಲ್ಲಿ ಇಂಚ್ ಟು ಫೂಟ್ ವಿಧಾನ ಅಂದರೆ ಯಾವುದೇ ಒಂದು ಕಟ್ಟಡದ ಎತ್ತರವನ್ನು ಕಂಡುಹಿಡಿಯುವುದು, ಪೆನ್ಸಿಲ್ ವಿಧಾನದ ಮೂಲಕ ಒಂದು ಮರದ ಎತ್ತರವನ್ನು ಕಂಡುಕೊಳ್ಳುವುದು ಹಾಗೆಯೇ ನದಿಯ ಅಗಲವನ್ನು ಕಂಡು ಹಿಡಿಯುವ ಟ್ರಯಾoಗ್ಯೂಲರ್ ವಿಧಾನದಲ್ಲಿ ಅಂದಾಜು ಗಣನೆಯನ್ನು ತಿಳಿದುಕೊಂಡರು.

ಪ್ರಥಮ ಚಿಕಿತ್ಸೆಯಲ್ಲಿ ಬಳಸುವ ವಸ್ತುಗಳ ಬಗ್ಗೆ ಮಾಹಿತಿ ಇದರಲ್ಲಿ ಅಪಘಾತವಾದ ಸಂದರ್ಭದಲ್ಲಿ, ಮೊದಲಾಗಿ ವ್ಯಕ್ತಿಯ ಉಸಿರಾಟ, ಎದೆಬಡಿತ, ರಕ್ತಸ್ರಾವ ಹಾಗೂ ನಾಡಿಬಡಿತ ನೋಡುವ ಕುರಿತು ಅಭ್ಯಾಸ, ವಿಧಾನಗಳು, ಪ್ರಾತ್ಯಕ್ಷಿಕೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇತಿಹಾಸ, ಬೆಳವಣಿಗೆ ವಿದ್ಯಾರ್ಥಿಗಳು ಒಟ್ಟಾಗಿ ಸೇರಿಕೊಂಡು ವಿವಿಧ ಗಂಟುಗಳನ್ನು ಹಾಕಲು ಅಭ್ಯಾಸ ಮಾಡಿದರು.


ಮೂರು ದಿನಗಳ ಕಾಲ ನಡೆದ ಶಿಬಿರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸುನೀತಾ,ಸಾಂದೀಪನಿ ವಿದ್ಯಾಸಂಸ್ಥೆಯ ಸ್ಕೌಟ್ ಮಾಸ್ಟರ್ ಮುರಳಿ ಹಾಗೂ ಸಂತ ಫಿಲೋಮಿನ ಕಾಲೇಜಿನ ರೋವರ್ ರಾಜ್ಯ ಪುರಸ್ಕಾರ ಪಡೆದ ಚಂದ್ರಾಕ್ಷ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಶಿಬಿರ ಯಶಸ್ವಿಯಾಗಿ ನಡೆಯುವಲ್ಲಿ ವಿದ್ಯಾಲಯದ ಪ್ರಾoಶುಪಾಲೆ ಮಾಲತಿ ಭಟ್, ಸ್ಕೌಟ್ ಮಾಸ್ಟರ್ ಸತೀಶ್, ಗೈಡ್ಸ್ ಶಿಕ್ಷಕಿ ಚಂದ್ರಕಲಾ ಸಹಕರಿಸಿದರು.

LEAVE A REPLY

Please enter your comment!
Please enter your name here