





ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ನರಿಮೊಗರು ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಜಂಟಿ ಆಶ್ರಯದಲ್ಲಿ ಎ.3ರಿಂದ ಎ.13 ರವರೆಗೆ ನಡೆಯುವ ಉಚಿತ ಬೇಸಿಗೆ ಕ್ರೀಡಾ ಶಿಬಿರವನ್ನು ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿ ಉದ್ಘಾಟಿಸಿದರು.


ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್, ಮುಖ್ಯಗುರು ರಾಜಾರಾಮ ವರ್ಮ, ಶಿಕ್ಷಣ ಸಂಯೋಜಕ ರಾಜಾರಾಮ ನೆಲ್ಲಿತ್ತಾಯ, ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಎಂ ಉಪಸ್ಥಿತರಿದ್ದರು.





6ನೇ ತರಗತಿಯ ಧನ್ವಿ ಸುಧೀರ್ ಪ್ರಾರ್ಥಿಸಿದರು. 9ನೇ ತರಗತಿಯ ಮೋಕ್ಷಿತ್ ಸ್ವಾಗತಿಸಿ, 7ನೇ ತರಗತಿಯ ಮೋಕ್ಷಿತ್ ವಂದಿಸಿದರು. 8ನೇ ತರಗತಿಯ ಅಚಿಂತ್ಯ ಕಾರ್ಯಕ್ರಮ ನಿರ್ವಹಿಸಿದರು.









