ಪುತ್ತೂರು ಪ್ರಧಾನ ಅಂಚೆ ಕಚೇರಿಯ ಮೇಲಂತಸ್ತಿಗೆ ವಿಕಲಚೇತನರಿಗಾಗಿ ರ‍್ಯಾಂಪ್ ವ್ಯವಸ್ಥೆ ಕಲ್ಪಿಸುವಂತೆ ಮನವಿ

0

ಪುತ್ತೂರು:ಪುತ್ತೂರು ಅಂಚೆ ಕಚೇರಿಯ ಮೇಲಂತಸ್ತಿಗೆ ವಿಕಲಚೇತನರಿಗೆ, ವಿಶೇಷ ಚೇತನರಿಗೆ ಮತ್ತು ಅಂಗವಿಕಲರಿಗೆ ಹೋಗಿ ಬರಲು ಅನುಕೂಲವಾಗುವಂತೆ ರ‍್ಯಾಂಪ್ ವ್ಯವಸ್ಥೆ ಅಳವಡಿಸಲು ಅಸಹಾಯಕರ ಸೇವಾ ಟ್ರಸ್ಟ್ ವತಿಯಿಂದ ಹಿರಿಯ ಅಂಚೆ ಅಧೀಕ್ಷಕರಿಗೆ ಮನವಿ ಮಾಡಲಾಗಿದೆ.

ವಿಕಲಚೇತನರಿಗೆ, ವಿಶೇಷ ಚೇತನರಿಗೆ ಮತ್ತು ಅಂಗವಿಕಲರಿಗೆ ಸಂಬಂಧಪಟ್ಟ ಹಲವಾರು ಸೌಲಭ್ಯಗಳ ಕುರಿತಂತೆ ಮತ್ತು ದಿನನಿತ್ಯದ ಕೆಲವೊಂದು ವ್ಯವಹಾರಗಳ ಕುರಿತಂತೆ ಅವರು ಅಂಚೆ ಕಚೇರಿಗೆ ಭೇಟಿ ನೀಡುವಂತಹದ್ದು ಅನಿವಾರ್ಯವಾಗಿದ್ದು, ಇತ್ತೀಚಿಗಿನ ದಿನ ಸರಕಾರದ ನಿಯಮದಂತೆ ಪಾನ್‌ಕಾರ್ಡ್ ಮತ್ತು ಆಧಾರ್ ಕಾರ್ಡಿಗೆ ಫೋನ್ ನಂಬರ್ ಲಿಂಕ್ ಮಾಡಿಸಬೇಕಾಗಿರುವುದು ಅನಿವಾರ್ಯವಾಗಿದೆ.

ಈ ಎಲ್ಲಾ ಕೆಲಸಗಳಿಗೆ ಅಂಚೆ ಕಚೇರಿಗೆ ಹೋಗಲು ಸರಿಯಾದ ರ‍್ಯಾಂಪ್ ವ್ಯವಸ್ಥೆ ಇಲ್ಲದೆ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ರ‍್ಯಾಂಪ್ ವ್ಯವಸ್ಥೆ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

LEAVE A REPLY

Please enter your comment!
Please enter your name here