ಎ.6-8: ಪುಣ್ಚಪ್ಪಾಡಿ  ಶಾಲೆಯಲ್ಲಿ ʼಬಣ್ಣದ ಬಣ್ಣʼ ಮಕ್ಕಳ ಶಿಬಿರ

0

ಹಿರಿಯ ಶಿಕ್ಷಣ ಚಿಂತಕ ಕಲಾನಿಧಿ ಗೋಪಾಡ್ಕರ್ ರವರಿಂದ ಉದ್ಘಾಟನೆ

ಪುತ್ತೂರು: ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ ಜ.ಪಂ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿ ಇದರ ವತಿಯಿಂದ ಎ.6 ರಿಂದ ಎ.8ರ ತನಕ ಮೂರು ದಿನಗಳ ಕಾಲ ಬಣ್ಣದ ಬಣ್ಣ ಎಂಬ ವಿಶಿಷ್ಟ ಮಕ್ಕಳ ಶಿಬಿರವು ಪುಣ್ಚಪ್ಪಾಡಿ ಸರಿಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಶಿಬಿರವನ್ನು ಕರ್ನಾಟಕದ ಹಿರಿಯ ಶಿಕ್ಷಣ ಚಿಂತಕ, ಸ್ವರೂಪ ಅಧ್ಯಯನ ಕೇಂದ್ರ ಮಂಗಳೂರು ಇದರ ಸಂಚಾಲಕ ಕಲಾನಿಧಿ ಗೋಪಾಡ್ಕರ್ ರವರು ಉದ್ಘಾಟಿಸಲಿದ್ದು ಹಿರಿಯ ರಂಗ ಲೇಖಕ, ಉಪ್ಪಿನಂಗಡಿ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ ಸುಬ್ಬಪ್ಪ ಕೈಕಂಬ ಮುಕ್ತಾಯದ ಮಾತುಗಳನ್ನಾಡಲಿದ್ದಾರೆ. ಶಿಬಿರದಲ್ಲಿ ವಿಶೇಷ ಅತಿಥಿಗಳಾಗಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ಆರ್, ಸವಣೂರಿನ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ಹಾಗೂ ಗೌರವ ಅತಿಥಿಗಳಾಗಿ ಪಿ  ಡಿ ಗಂಗಾಧರ್ ರೈ, ಕೃಷ್ಣಕುಮಾರ್ ರೈ ಪುಂಚಪಾಡಿ, ವಿಷ್ಣು ಭಟ್ ಅಜಿಲೋಡಿ, ಕುಶಲ ಪಿ ರೈ ಪುಂಚಪಾಡಿ, ಪಿ ಡಿ ಕೃಷ್ಣಕುಮಾರ್ ರೈ, ಸುಜಯ ಕೆ,  ಸುಲಾಯ, ವಿಶಾಖ್ ರೈ ತೋಟತಡ್ಕ ಮುಂತಾದವರು ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಕಥೆಗೊಂದು ಪಾತ್ರ, ಹಾಡಿಗೊಂದು ಹೆಜ್ಜೆ, ರಂಗಕ್ಕೊಂದು ರಾಗ, ಚಿತ್ರಕೊಂದು ಬಣ್ಣ, ಕಾಗದಕೊಂದು ಕ್ರಾಫ್ಟ್, ಕಸಕ್ಕೊಂದು ರೂಪ, ಅಗ್ನಿಶಾಮಕ ಮಾಹಿತಿ, ಆರೋಗ್ಯ ಜಾಗೃತಿ ಹೀಗೆ ಬೇರೆ ಬೇರೆ ವಿಷಯಗಳ ಕಲಿಕೆ ನಡೆಯಲಿದ್ದು ಕಲಾ ಶಿಕ್ಷಕರಾದ ಪದ್ಮನಾಭ ಬೆಳ್ಳಾರೆ, ಯುವ ರಂಗ ನಿರ್ದೇಶಕ ಉದಯ ಸಾರಂಗ್, ಹಕ್ಕಿತಜ್ಞ ಅರವಿಂದ ಕುಡ್ಲ, ಕರಕುಶಲ ಶಿಕ್ಷಕರಾದ ಶ್ರೀಮತಿ ಬಕುಳ, ಚಿತ್ರ ಕಲಾವಿದರಾದ ಪ್ರಜಿತ್ ರೈ ಸೂಡಿಮುಳ್ಳು, ತೇಜಸ್ವಿ,  ದೀಪ್ತಿ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಾಲಾ ಎಸ್ ಡಿ  ಎಂ ಸಿ ಅಧ್ಯಕ್ಷೆ ಗಾಯತ್ರಿ ಓಂತಿಮನೆ ಹಾಗೂ ಮುಖ್ಯಗುರು ರಶ್ಮಿತಾ ನರಿಮೊಗರುರವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here