





ಪುತ್ತೂರು: ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕ ರಾಮಚಂದ್ರರವರಿಗೆ ನಿವೃತ್ತಿ ಜೀವನದ ಬಿಳ್ಕೊಡುಗೆ ಸಮಾರಂಭವನ್ನು ವಿದ್ಯಾರ್ಥಿಗಳು ಎ.5ರಂದು ನಡೆಸಿದರು. ಕಾಲೇಜು ಐಕ್ಯೂಎಸ್ಸಿ ಸಂಚಾಲಕ ಹರೀಶ್ ಅಧ್ಯಕ್ಷತೆ ವಹಿಸಿದರು.


ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೀತ್ ಮತ್ತು ರಾಮಚಂದ್ರರವರ ಪತ್ನಿ ಹೇಮಲತಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಭವಿತಾ (ತೃತೀಯ ಬಿ.ಎ) ಕಾರ್ಯಕ್ರಮ ನಿರೂಪಿಸಿದರು. ಪ್ರೀತೆಶ್ (ಪ್ರಥಮ ಬಿ.ಎ) ಸ್ವಾಗತಿಸಿದರು. ವಿಖ್ಯಾತ್ (ಪ್ರಥಮ ಬಿ.ಎ) ಗ್ರಂಥಪಾಲಕರ ಪರಿಚಯ ಬೋಧಿಸಿದರು. ಎಡ್ವರ್ಡ್ (ದ್ವಿತೀಯ ಬಿಎ) ಸನ್ಮಾನ ಪತ್ರ ಬೋಧಿಸಿದರು. ಹರ್ಷಿತ್ ಕುಮಾರ್ ಎಂ.ಜಿ (ತೃತೀಯ ಬಿ.ಎ) ವಂದಿಸಿದರು.





ಕಾಲೇಜು ಉಪಾನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








