ಆಲಂಕಾರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಹಿಳಾ ಬಿಲ್ಲವ ವೇದಿಕೆ ಅಲಂಕಾರು ಇವರ ವತಿಯಿಂದ ಬಿಲ್ಲವರ ಆಟಿಕೂಟ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ್ ದಯಾಳ್ ಉಪಾಧ್ಯಾಯ ಸಭಾಭವನದಲ್ಲಿ ನಡೆಯಿತು.
ಮಕ್ಕಳಿಗೆ, ಮಹಿಳೆಯರಿಗೆ ಮತ್ತುಪುರುಷರಿಗೆ ಮನೋರಂಜನ ಸ್ಪರ್ಧೆಗಳು ನಡೆಯಿತು. ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಭಾವಗೀತೆ, ವಿನೋದ್ ಕುದ್ರಡ್ಕ ಇವರಿಂದ ಗಾಯನ ಕಾರ್ಯಕ್ರಮ ನಡೆಯಿತು. ನಂತರ ಸಭಾ ಕಾರ್ಯಕ್ರಮ ನಡೆಯಿತು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
ಅಲಂಕಾರು ಬಿಲ್ಲವ ಗ್ರಾಮ ಸಮಿತಿಯು ಪುತ್ತೂರು ಬಿಲ್ಲವ ಸಂಘದ ಒಂದು ಅವಿಭಾಜ್ಯ ಅಂಗವಾಗಿ ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಹಕಾರ ನೀಡುತ್ತಿರುವುದು ಉಳಿದ ಗ್ರಾಮ ಸಮಿತಿಯವರಿಗೆ ಮಾದರಿಯಾಗಿದೆ ಎಂದರು.ದೇರಳಕಟ್ಟೆ ಎಫ್.ಎಂ.ಹೆಚ್.ಎಂ ಕಾಲೇಜ್ ನ ಸಹಾಯಕ ಪ್ರೋಪೆಸರ್ ಡಾ!. ಹರ್ಷಿತ ನೈಯ್ಯಲ್ಗ
ಅಟಿಕೂಟದ ಬಗ್ಗೆ ಮಾತನಾಡಿ ಅಟಿ ತಿಂಗಳಿನಲ್ಲಿ ಹೇಳುವ ನುಡಿಕಟ್ಟಿನ ವಿಶೇಷತೆಯನ್ನು ತಿಳಿಸಿ ಆಟಿ ತಿಂಗಳಿನಲ್ಲಿ ಪ್ರಕೃತಿಯಲ್ಲಿ ಸಿಗುವಂತಹ ಗಿಡಮೂಲಿಕೆಗಳ ಮಹತ್ವ ಮತ್ತು ಅದರ ಸಂರಕ್ಷಣೆಯ ಬಗ್ಗೆ ನಾವು ಕಾಳಜಿ ವಹಿಸಿ ಪರಿಸರವನ್ನು ಸಂರಕ್ಷಿಸಬೇಕು,ಹಿಂದಿನಕಾಲದಲ್ಲಿ ಎಲ್ಲಾ ರೋಗರುಜಿನಗಳಿಗೆ ಗಿಡಮೂಲಿಕೆಗಳೆ ಔಷಧಿಯಾಗಿತ್ತು.ಆ ಸಂಧರ್ಭದಲ್ಲಿ ಪರಿಸರವನ್ನು ಸಂರಕ್ಷಣೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆಧುನಿಕ ಪದ್ಧತಿಗೆ ಮಾರುಹೋಗಿ ಪರಿಸರ ನಾಶ ಮಾಡಿ ಆರೋಗ್ಯದ ಮೇಲದುಷ್ಪರಿಣಾಮಗಳು ಉಂಟಾಗಿದೆ. ಈ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಈ ಆಟಿಕೂಟ ಬಹಳಷ್ಟು ಮಹತ್ವ ಪಡೆದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಅಜಿತ್ ಕುಮಾರ್ ಪಾಲೇರಿ ,ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ,ಪುತ್ತೂರು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರ ಮಡ್ಯೋಟ್ಟು, ಪುತ್ತೂರು ಮಹಿಳಾ ಬಿಲ್ಲವ ಸಂಘದ ಅಧ್ಯಕ್ಷೆ ವಿಮಲಾ ಸುರೇಶ್ ಪಡ್ನೂರು ಸಂದರ್ಭೋಚಿತ ವಾಗಿ ಮಾತನಾಡಿ ಶುಭಾಹಾರೈಸಿದರು.ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಅಜಿತ್ ಕುಮಾರ್ ಪಾಲೇರಿ,ನಾಟಿ ವೈದ್ಯೆ ಲಲಿತಾ ಕೇಪುಳು, ಬಿಲ್ಲವ ಸಂಘದ ವಲಯ ಸಂಚಾಲಕರಾದ ದಿನೇಶ್ ಕೇಪುಳು,ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದು ಉದ್ಯೋಗವನ್ನು ಪಡೆದ ನಾರಾಯಣ ಪೂಜಾರಿ ಮತ್ತು ಶಕುಂತಲಾ ನಡುಮನೆಯವರ ಪುತ್ರ ಸೃಜನ್ ರವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಆಲಂಕಾರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷರಾದ
ಮಲ್ಲಿಕಾ ಜಯಕರ ಪೂಜಾರಿ ಕಲ್ಲೇರಿಯವರು ವಹಿಸಿದ್ದರು. ವೇದಿಕೆಯಲ್ಲಿ ಆಲಂಕಾರು ಗ್ರಾ.ಪಂ ಉಪಾಧ್ಯಕ್ಷರಾದ ರವಿ ಕುಂಞಲಡ್ಡ,ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಪಟ್ಟೆ ಮಜಲು ,ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷರಾದ ರಮೇಶ್ ಕೇಪುಳು .ಆಲಂಕಾರು ವಲಯ ಬಿಲ್ಲವ ವೇದಿಕೆಯ ಸಂಚಾಲಕಿ ಪ್ರಮೀಳಾ ಜಯಂತ್ ನೆಕ್ಕಿಲಾಡಿ .ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುನೀತ್ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಯಂತ್ ಪೂಜಾರಿ ನೆಕ್ಕಿಲಾಡಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಚೈತ್ರ ಕೇಪುಳು, ಉಪಾಧ್ಯಕ್ಷೆ ಭವ್ಯ ಕೇಪುಳು ಗೌರವ ಸಲಹೆಗಾರರಾದ ವಿನುತಾ ಉಮೇಶ್, ತಾರಕೇಪುಳು ಮಮತಾ ಜಿನಪ್ಪ ಪೂಜಾರಿ ಮೋನಿಶಾ ಸಹಕರಿಸಿದರು. ನಮಿತಾ ಕೊಂಡಾಡಿ ಮತ್ತು ನಿಶಾ ಕೊಂಡಾಡಿ ಪ್ರಾರ್ಥಿಸಿ, ಸದಾನಂದ ಕುಮಾರ್ ಮಡ್ಯೂಟ್ಟು
ಸ್ವಾಗತಿಸಿ . ಅನಿಲ್ ಕುಮಾರು ಊರು ಸಾಗು ಕಾರ್ಯಕ್ರಮ ನಿರೂಪಿಸಿ .ಗೀತೆಶ್ ಧನ್ಯವಾದ ಸಮರ್ಪಿಸಿದರು.