ಉಪ್ಪಿನಂಗಡಿ: ಹನುಮ ಜಯಂತಿಯ ಅಂಗವಾಗಿ ಇಲ್ಲಿನ ವನಭೋಜನದ ಶ್ರೀ ವೀರಾಂಜನೇಯ ದೇವರಿಗೆ ವಿಶೇಷ ಅಲಂಕಾರ ರಂಗಪೂಜೆ ಹಾಗೂ ವಸಂತ ಪೂಜೆ ಸೇರಿದಂತೆ ಧಾರ್ಮಿಕ ವಿಧಿ- ವಿಧಾನಗಳು ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಆಡಳಿತ ಮೊಕೇಸ್ತರ ಬಿ. ಗಣೇಶ ಶೆಣೈ, ಮೊಕೇಸ್ತರಾದ ಡಾ. ಯು. ರತ್ನಾಕರ ಶೆಣೈ, ಕೆ.ಅನಂತರಾಯ ಕಿಣಿ, ದೇವಿದಾಸ ಭಟ್, ಭಜನಾ ಮಂಡಳಿ ಅಧ್ಯಕ್ಷರಾದ ಹರೀಶ್ ಪೈ, ಪ್ರಮುಖರಾದ ಸತೀಶ್ ಕಿಣಿ, ವಿಠಲದಾಸ್ ಮಲ್ಯ, ರವೀಂದ್ರ ಪೈ, ವಿದ್ಯಾಧರ್ ಮಲ್ಯ, ಯೆಳ್ತಿಮಾರ್ ವೆಂಕಟೇಶ್ ಶೆಣೈ, ಗೋಕುಲ್ದಾಸ ಭಟ್, ಮಂಜುನಾಥ ನಾಯಕ್, ರಾಘವೇಂದ್ರ ಪ್ರಭು, ರಾಜೇಶ್ ಪೈ, ಕೆ. ರಾಘವೇಂದ್ರ ನಾಯಕ್, ಕರಾಯ ಗಣೇಶ ನಾಯಕ್, ಕೆ. ಗಿರೀಶ್ ನಾಯಕ್, ಪಣಕಜೆ ಪ್ರಸಾದ್ ಶೆಣೈ ಮತ್ತಿತರು ಉಪಸ್ಥಿತರಿದ್ದರು. ಸೇವಾಕರ್ತರಾದ ಯು. ನಾಗರಾಜ ಭಟ್ ಅವರಿಂದ ರಂಗಪೂಜೆ ಸೇವೆ ಆಯೋಜಿಸಲಾಗಿತ್ತು. ಅರ್ಚಕರಾದ ಸಂದೀಪ್ ಭಟ್ ಪೂಜಾ ವಿಧಿವಿಧಾನವನ್ನು ನಡೆಸಿಕೊಟ್ಟರು.