ನೀರಕಟ್ಟೆ: ಕಾರು ಪಲ್ಟಿ – ಮಹಿಳೆಗೆ ಗಾಯ

0

ನೆಲ್ಯಾಡಿ: ಕಾರು ಪಲ್ಟಿಯಾಗಿ ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ಎ.8 ರಂದು ಬೆಳಿಗ್ಗೆ ಮಂಗಳೂರು – ಬೆಂಗಳೂರು ರಾ.ಹೆ. 75ರ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ನಡೆದಿದೆ.

ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ನೀರಕಟ್ಟೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮಹಿಳೆಯೋರ್ವರು ಗಾಯಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here