ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ REVIVE 2023 ಬೇಸಿಗೆ ಶಿಬಿರದ ಭಾಗವಾಗಿ ರೋಬೋಟಿಕ್ ಮತ್ತು ಡ್ರೋನ್ಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಎ.9ರಂದು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ವಿದ್ಯಾರಶ್ಮಿ ವಿದ್ಯಾಲಯದ ಉಪನ್ಯಾಸಕ ರೋಹಿತ್ ,ಟೆಕ್ನಾಲಜಿಸ್ಟ್ ಧನುಷ್ ವಿತ್ತಾರ ಹಾಗೂ ಟೆಕ್ನಾಲಜಿಸ್ಟ್ ಶ್ರೀಕಾಂತ್ ವಿತ್ತಾರ ನಡೆಸಿಕೊಟ್ಟರು. ಆಧುನಿಕ ತಂತ್ರಜ್ಞಾನಗಳ ಬಗ್ಗೆ ಮಾಹಿತಿ, ಯಂತ್ರಗಳ ತಯಾರಿಕೆ, ಕಾರ್ಯನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ತಮ್ಮದೇ ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿರುವ ವಿವಿಧ ಮಾಡೆಲ್ ಗಳನ್ನು, ಅವುಗಳು ಕಾರ್ಯನಿರ್ವಹಿಸುವ ರೀತಿ, ಡ್ರೋನ್ಗಳ ಉಪಯುಕ್ತ ಮಾಹಿತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಮಧುಶ್ರೀ ನಿರೂಪಿಸಿ, ಸ್ವಾಗತಿಸಿದರು. ಹಿತೇಶ್ ವಂದಿಸಿದರು.