ಪುತ್ತೂರು: ಈಶ್ವರಮಂಗಲ ಮೇನಾಲ ನಿವಾಸಿ ಮಹಮ್ಮದ್ ಹಾಜಿ(68.ವ) ಅವರು ಎ.10ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉದ್ಯಮಿ ಮೇನಾಲ ಅಬ್ದುಲ್ ರಹಿಮಾನ್ ಹಾಜಿಯವರ ಸಹೋದರನಾಗಿರುವ ಮಹಮ್ಮದ್ ಹಾಜಿಯವರು ನೆ.ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಐದು ಬಾರಿ ನೆ.ಮುಡ್ನೂರು ಗ್ರಾ.ಪಂ ಸದಸ್ಯರಾಗಿ ಚುನಾಯಿತರಾಗಿದ್ದರು. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಹಮ್ಮದ್ ಹಾಜಿ ಅವರು ದ.ಕ ಜಿಲ್ಲಾ ಕಾಂಗ್ರೆಸ್, ಪುತ್ತೂರು ಬ್ಲಾಕ್ ಮತ್ತು ಸ್ಥಳೀಯ ಮಟ್ಟದ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಈಶ್ವರಮಂಗಲ ಮಸೀದಿಯಲ್ಲಿ ಸುಮಾರು 10 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುತ್ತಿದ್ದರು. ಎಲ್ಲರೊಂದಿಗೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದ ಮಹಮ್ಮದ್ ಹಾಜಿಯವರು ಸ್ಥಳೀಯವಾಗಿ ‘ಮಿನಿ ಹಟ್ಟಾ’ ಎಂದೇ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ ಬೀಫಾತಿಮಾ, ಪುತ್ರ ಗಲ್ಫ್ ಉದ್ಯೋಗಿ ಹಾಶಿಂ ಮೇನಾಲ, ಪುತ್ರಿಯರಾದ ಮಿಶ್ರಿಯಾ, ಖೈರುನ್ನಿಸಾ, ಹಬೀಬಾ, ಸಹೋದರರಾದ ಉದ್ಯಮಿ ಕಾಂಗ್ರೆಸ್ ಮುಖಂಡ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಹಾಗೂ ಸತ್ತಾರ್ ಮೇನಾಲ ಅವರನ್ನು ಅಗಲಿದ್ದಾರೆ.