ಕರಾಯ ಲಕ್ಷ್ಮಣ ಶೆಟ್ಟಿಯವರಿಗೆ ಬಾರ್ಯ ನೂರಿತ್ತಾಯ ಪ್ರತಿಷ್ಠಾನದ ಪ್ರಶಸ್ತಿ

0

ಪುತ್ತೂರು: ದಿ. ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನವು ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಸಾಧಕ ಕರಾಯ ಲಕ್ಷ್ಮಣ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಎ.12ರಂದು ಪರ್ಲಡ್ಕ ‘ಅಗಸ್ತ್ಯ’ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನೀಲ್ತ್ಯಾರು ಮನೆಯ ಲಕ್ಷ್ಮಣ ಶೆಟ್ಟರು ಧಾರ್ಮಿಕ, ಸಾಮಾಜಿಕ ಕಾರ್ಯಕರ್ತರು. ತಾಳಮದ್ದಳೆ ಅರ್ಥದಾರಿ. ಕರಾಯ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾಗಿದ್ದಾಗ ಭಜನಾ ಕಮ್ಮಟ ಮಾಡಿದ ನೆಗಳ್ತೆ ಇವರದು. ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯತೆ. ಈಗವರಿಗೆ ಎಂಭತ್ತೆಂಟರ ಹರೆಯ. ಬದ್ಧತೆಯ ಬದುಕಿನ ಲಕ್ಷ್ಮಣ ಶೆಟ್ಟರ ಸಾಮಾಜಿಕ ಕಾಳಜಿಗೆ ಬಾರ್ಯ ಪ್ರತಿಷ್ಠಾನದ ಈ ವರುಷದ ಗೌರವ.

ಪ್ರತಿಷ್ಠಾನವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಪ್ರತಿವರುಷ ಗೌರವಿಸುವ ಪರಿಪಾಠ ಇಟ್ಟುಕೊಂಡಿದೆ. ಇದುವರೆಗೆ – ಬ್ರಹ್ಮಶ್ರೀ ದಿ.ಕೆಮ್ಮಿಂಜೆ ಕೇಶವ ತಂತ್ರಿ, ದಿ.ಡಾ.ಶೇಣಿ ಗೋಪಾಲಕೃಷ್ಣ ಭಟ್, ದಿ.ರಾಮದಾಸ ಸಾಮಗ, ದಿ.ಬಾರ್ಯ ಜಯಕೀರ್ತಿ ಬುಣ್ಣು, ದಿ.ಚಂದು ಮೇಸ್ತ್ರಿ, ದಿ.ನಾಟಿವೈದ್ಯೆ ಅಕ್ಕು ಹೆಂಗ್ಸು, ಪಾಕಶಾಸಜ್ಞ ದಿ.ಶ್ರೀನಿವಾಸ ಭಟ್, ಸರಾ- ರಾಮಚಂದ್ರ ಆಚಾರ್ಯ, ಸಂಗೀತ ಸಾಧಕ ಕುದ್ಮಾರು ವೆಂಕಟ್ರಮಣ ಭಟ್, ಅಧ್ಯಾಪಕ ವಾಸುದೇವ ಮಯ್ಯ, ವೈದ್ಯ ಡಾ.ಜೆ.ಸಿ.ಅಡಿಗ, ಬರೆಪ್ಪಾಡಿ ಅನಂತಕೃಷ್ಣ ಭಟ್, ಉಮೇಶ ಶೆಣೈ, ಸಹಕಾರಿ ನಿರಂಜನ ಕುಮಾರ್, ಪ್ರೊ.ವೇದವ್ಯಾಸ, ಕೆಯ್ಯೂರು ನಾರಾಯಣ ಭಟ್, ಫಿಲೋಮಿನಾ ಇ. ಬ್ರೆಗ್ಸ್, ವೇ.ಮೂ.ಹರೀಶ್ ಉಪಾಧ್ಯಾಯ, ಪೂಕಳ ಲಕ್ಷ್ಮೀನಾರಾಯಣ ಭಟ್ ರಾಮಕೃಷ್ಣ ಮಿತ್ಯಾಂತರು ಹಾಗೂ ಮೂಡಾಯೂರು ಚಂದ್ರಶೇಖರ ದೇವಾಡಿಗ ಪ್ರಶಸ್ತಿ ಸ್ವೀಕರಿಸಿದ್ದಾರೆ.

LEAVE A REPLY

Please enter your comment!
Please enter your name here