ಎ.15ರಿಂದ ಪುತ್ತೂರು ಜಾತ್ರಾ ಗದ್ದೆಯಲ್ಲಿ ಸ್ವಚ್ಚ ಸ್ವಾದಿಷ್ಟ ಆಹಾರ ಜೇಸಿಐ ನಳಪಾಕ

0

ಪುತ್ತೂರು: ಕಳೆದ 16ವರ್ಷದಿಂದ ಸತತವಾಗಿ ಜಾತ್ರೋತ್ಸವ ಸಂದರ್ಭದಲ್ಲಿ ಭಕ್ತಾದಿಗಳಿಗೆ ಸ್ವಚ್ಚ ಹಾಗೂ ಸ್ವಾದಿಷ್ಟ ಆಹಾರವನ್ನು ಕೊಡುವ ಉದ್ದೇಶದಿಂದ ಜೇಸಿಐ ಪುತ್ತೂರು ಸಂಸ್ಥೆಯು ನಳಪಾಕ-2023 ಸಾದರಪಡಿಸುತ್ತಿದೆ. ಈ ಕಾರ್ಯಕ್ರಮದಿಂದ ಬಂದಂತಹ ಲಾಭದಿಂದ ಜೇಸಿಐ ಪುತ್ತೂರು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಆಯೋಜಿಸುತ್ತದೆ.

ನಳಪಾಕ ಎಂಬುದು ಒಂದು ಸುಂದರ ಕಲ್ಪನೆ:
ಬಿಸಿಬಿಸಿ ರುಮಾಲು ರೋಟಿ ಅದರೊಂದಿಗೆ ಸವಿಯಲು ಒಂದೊಂದು ದಿನ ಒಂದೊಂದು ಗ್ರೇವಿ, ಪನೀರ್ ಮಸಾಲ, ಚೆನ್ನ ಮಸಾಲ, ಮಿಕ್ಸ್ ವೆಜ್ ಕೂರ್ಮ ಹೀಗೆ ವಿವಿಧ ತರಹದ ಆಹಾರ ಕೊಡಲಾಗುತ್ತದೆ. ಇದರೊಂದಿಗೆ ಆರೋಗ್ಯ ವರ್ಧಕ ನೇರಳೆ ಹಣ್ಣಿನ ಜ್ಯೂಸ್, ದ್ರಾಕ್ಷಿ ಜ್ಯೂಸ್, ಮಾವಿನ ಹಣ್ಣಿನ ಜ್ಯೂಸ್ ಕೂಡ ಇರುತ್ತದೆ.ಸ್ಟಾಲ್ ಮೆರುಗನ್ನು ಹೆಚ್ಚಿಸಲು ಮರಿಕೆಯ ನೈಸರ್ಗಿಕ ಐಸ್ ಕ್ರೀಮ್ ಕೂಡ ಲಭ್ಯವಿದ್ದು ಇದರಲ್ಲಿ ಮಾವು, ಹಲಸು, ಎಳೆನೀರು, ಚಿಕ್ಕು ಹೀಗೆ ಹತ್ತು ಹಲವು ಬಗೆಯ ವಿಶೇಷ ಹಣ್ಣಿನಿಂದ ತಯಾರಿಸಿದ ಐಸ್ ಕ್ರೀಮ್ ದೊರೆಯುತ್ತದೆ.

ಪ್ರತಿವರ್ಷದಂತೆ ಈ ವರ್ಷವೂ ಪುತ್ತೂರು ಜಾತ್ರಾಗದ್ದೆಯಲ್ಲಿ ಜೇಸಿಐ ನಳಪಾಕ ಎ.15ರಿಂದ 18ರವರೆಗೆ ನಡೆಯುತ್ತದೆ.

LEAVE A REPLY

Please enter your comment!
Please enter your name here