ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಪುತ್ತೂರಿನ ಐಸಿಎಆರ್ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಜೆ. ದಿನಕರ ಅಡಿಗರವರು ಏ.13 ರಂದು ಭೇಟಿ ನೀಡಿ ಸಮಗ್ರ ಕೃಷಿ ವೀಕ್ಷಣೆ ಮಾಡಿ ವಿಶೇಷವಾಗಿ ಗೇರು ಬೆಳೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಡಮಜಲು ಸುಭಾಸ್ ರೈಯವರ ಗೇರು ತೋಟ ಮೊದಲಿನಿಂದಲೂ ಎಲ್ಲರಿಗೂ ಮಾದರಿಯಾದ ತೋಟವಾಗಿದೆ. ಇವರ ಕೃಷಿ ಮತ್ತು ಮನೆಯ ಆದರಾತಿಥ್ಯಕ್ಕೆ ಖುಷಿಪಟ್ಟಿದ್ದೇನೆ’ ಎಂದು ಡಾ. ದಿನಕರ ಅಡಿಗ ಹೇಳಿದರು.ಈ ವೇಳೆ ದ.ಕ.ಹಾಲು ಒಕ್ಕೂಟದ ಉಪಾಧ್ಯಕ್ಷ, ಎಸ್ಸಿಡಿಸಿಸಿ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳಜ್ಜ, ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ. ರವಿಪ್ರಸಾದ್ ಜೊತೆಗಿದ್ದರು.
ಕಡಮಜಲು ಸುಭಾಸ್ ರೈಯವರು ಬರಮಾಡಿಕೊಂಡು ಸ್ವಾಗತಿಸಿದರು. ಪ್ರೀತಿ ಎಸ್. ರೈ ಸತ್ಕರಿಸಿದರು. ವಿಂಧ್ಯಾ ದುರ್ಗಾಪ್ರಸಾದ್ ಮೇಂಡ ಸಹಕರಿಸಿದರು.