ಪುತ್ತೂರು: ತಾಲೂಕಿನ ಪ್ರತಿಷ್ಠಿತ ಮನೆತನ ನುಳಿಯಾಲು ತರವಾಡು ಬಾರಿಕೆ ಶ್ರೀ ಧರ್ಮ ಚಾವಡಿಯಲ್ಲಿ ಬಿಸು ಕಣಿ ಇರಿಸಿ ಸಮಸ್ತ ಕುಟುಂಬಿಕರು ಮತ್ತು ಬಂಧುಗಳ ಉಪಸ್ಥಿತಿಯಲ್ಲಿ ಯಜಮಾನ ಜಗನ್ನಾಥ ರೈಯವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಮತ್ತು ಎ 22 ಮತ್ತು 23 ರಂದು ನಡೆಯಲಿರುವ ಧರ್ಮ ದೈವ ಬೀರ್ಣಾಳ್ವ ಮತ್ತು ಸಮಸ್ತ ಪರಿವಾರ ದೈವಗಳ ನೇಮೋತ್ಸವ, ನಾಗತಂಬಿಲ ಹಾಗೂ ಶ್ರೀ ವೆಂಕಟ್ರಮಣ ದೇವರ ಹರಿಸೇವಾ ಕಾರ್ಯಗಳಿಗಾಗಿ ವಿಧಿ ಪೂರ್ವಕವಾಗಿ ಬಾಳೆಗಿಡಗಳಿಗೆ ಪೂಜೆ ಸಲ್ಲಿಸಿ ಗೊನೆ ಮುಹೂರ್ತವನ್ನು ಎ. 15ರಂದು ನೆರವೇರಿಸಲಾಯಿತು.
ಧರ್ಮ ದೈವ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ಜಗನ್ನಾಥ ರೈನುಳಿಯಾಲುರವರ ಅಧ್ಯಕ್ಷತೆಯಲ್ಲಿ ನಡೆದ ತರವಾಡು ಟ್ರಸ್ಟ್ ಮತ್ತು ಕುಟುಂಬಿಕರ ಬಂಧುಗಳ ಸಭೆಯಲ್ಲಿ ಮುಂಬರುವ ಕಾಲಾವಧಿ ನೇಮೋತ್ಸವದ ಕುರಿತು ವಿಸ್ತ್ಕೃತವಾಗಿ ಚರ್ಚಿಸಿ ಜವಾಬ್ದಾರಿಯನ್ನು ಹಂಚಿಕೊಂಡು ನಿರ್ವಹಿಸಲು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಲಾಯಿತು.
ಟ್ರಸ್ಟಿನ ಪದಾದಿಕಾರಿಗಳಾದ ಪುರುಷೋತ್ತಮ ಆರ್ ಶೆಟ್ಟಿ, ಪುರಂದರ ರೈ ಮಿತ್ರಂಪಾಡಿ, ನುಳಿಯಾಲು ಜಯರಾಮ ರೈ, ಟ್ರಸ್ಟ್ ಸದಸ್ಯರು,ಕುಟುಂಬಿಕರು ಮತ್ತು ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಬಳಿಕ ಸಹ ಭೋಜನ ನಡೆಯಿತು.