ಪುತ್ತೂರು ಜಾತ್ರೋತ್ಸವ-ಹೂತೇರು, ಕೆರೆ ಆಯನದಲ್ಲಿ ಸಂಭ್ರಮಿಸಿದ ಭಕ್ತರು

0

ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯಲ್ಲಿ ಎ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಆಗಮನವಾಯಿತು.ಆ ಬಳಿಕ ರಾತ್ರಿ ವೈಭವದ ಉತ್ಸವ ನಡೆಯಿತು. ಎ.17ರ ಬ್ರಾಹ್ಮೀಮುಹೂರ್ತದಲ್ಲಿ ಕೆರೆ ಆಯನ ನಡೆದು, ನೂತನ ಶಿಲಾ ಮಂಟಪದಲ್ಲಿ ಶ್ರೀ ದೇವರು ಪೂಜೆ ಸ್ವೀಕರಿಸಿದರು. ಉಳ್ಳಾಲ್ತಿ ಕಿರುವಾಳು ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವದಲ್ಲಿ ಉಡಿಕೆ, ಚೆಂಡೆ, ವಾದ್ಯ, ಕೊಂಬು, ಶಂಖ, ಭಜನೆ ಸುತ್ತು ನಡೆಯಿತು.ಬಳಿಕ ದೇವಳದ ಹೊರಾಂಗಣದಲ್ಲಿ ಹೂತೇರು, ಕೆರೆ ಆಯನ(ತೆಪ್ಪೋತ್ಸವ)ನಡೆಯಿತು. ಶ್ರೀ ದೇವರು ಪುಷ್ಕರಣಿಯ ಮಧ್ಯದಲ್ಲಿರುವ ನೂತನ ಶಿಲಾ ಮಂಟಪದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ದೇವಳ ಪ್ರವೇಶಿಸುವ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here