ನಿಡ್ಪಳ್ಳಿ; ಇಲ್ಲಿಯ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ವರುಣನ ಕೃಪೆಗಾಗಿ ಗಣಪತಿ ದೇವರು ಮತ್ತು ಶ್ರೀ ಶಾಂತದುರ್ಗಾ ದೇವಿಗೆ ಪ್ರಧಾನ ಅರ್ಚಕ ನವೀನ್ ಹೆಬ್ಬಾರ್ ಇವರ ನೇತೃತ್ವದಲ್ಲಿ ಸಾಮೂಹಿಕ ಸೀಯಾಳಾಭಿಷೇಕ, ಸಾಮೂಹಿಕ ಪ್ರಾರ್ಥನೆ ಮತ್ತು ರುದ್ರಧ್ಯಾಯಿಗಳಿಂದ ರುದ್ರಪಾರಾಯಣ ಏ.18 ರಂದು ನಡೆಯಿತು.
ಈ ಬೇಸಿಗೆಯಲ್ಲಿ ಇದುವರೆಗೂ ಮಳೆ ಬಾರದೆ ಇಳೆ ಒಣಗುತ್ತಿರುವುದರಿಂದ ದೇವರಿಗೆ ಈ ರೀತಿಯ ಸೇವೆ ನೀಡಿದರೆ ವರುಣ ದೇವರು ಸಂತುಷ್ಟನಾಗಿ ಭೂಮಿಗೆ ಮಳೆಯನ್ನು ಕಲ್ಪಿಸಿ ಕೊಡುತ್ತಾನೆ ಎಂಬ ಬಲವಾದ ನಂಬಿಕೆ ಇದೆ. ಆದುದರಿಂದ ಗ್ರಾಮದ ಅಪಾರ ಭಕ್ತಾದಿಗಳು ಸೀಯಾಳ ಸಮರ್ಪಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಭಿಷೇಕ ನಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಣೆ ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷರಾದ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು, ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ಮಾಜಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ, ಕಾರ್ಯದರ್ಶಿ ಕುಮಾರ ನರಸಿಂಹ ಭಟ್ ಬುಳೆನಡ್ಕ, ಕೋಶಾಧಿಕಾರಿ ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ, ಸದಸ್ಯರಾದ ವಾಸುದೇವ ಭಟ್ ಮುಂಡೂರು, ತಿಮ್ಮಣ್ಣ ರೈ ಆನಾಜೆ,ಗೋಪಾಲಕೃಷ್ಣ ಭಟ್ ಕುಕ್ಕುಪುಣಿ, ರಾಮಚಂದ್ರ ಮಣಿಯಾಣಿ ಬೊಳುಂಬುಡೆ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.