ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಅಧ್ಯಕ್ಷ ದೇವಪ್ಪ ನೋಂಡರಿಗೆ ನುಡಿ ನಮನ

0

ಪುತ್ತೂರು: ಇತ್ತೀಚೆಗೆ ನಿಧನರಾದ ಪುತ್ತೂರು ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ, ಹೊಟೇಲ್ ಶ್ರೀ ಲಕ್ಷ್ಮೀ ಮಾಲಕ, ಒಡಿಯೂರು ಸೊಸೈಟಿ ನಿರ್ದೇಶಕ ದೇವಪ್ಪ ನೋಂಡ ಅವರಿಗೆ ಶ್ರೀ ಒಡಿಯೂರು ಗುರುದೇವಾ ಸೇವಾ ಬಳಗ ,ವಜ್ರಮಾತಾ ವಿಕಾಸ ಕೇಂದ್ರ , ಗ್ರಾಮ ವಿಕಾಸ ಯೋಜನೆ ಹಾಗೂ ಒಡಿಯೂರು ವಿವಿಧೋದ್ದೇಶ ಸಹಕಾರಿ ಇದರ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ (ಎ.18 ) ನೆಲ್ಲಿಕಟ್ಟೆ ಮಾತೃಛಾಯಾ ಸಭಾಭವನದಲ್ಲಿ ನಡೆಯಿತು.

ಸಹಕಾರಿ ಧುರೀಣ ,ಸವಣೂರು ಸೀತಾರಾಮ ರೈ ,ಮೃತರ ಭಾವಚಿತ್ರದ ಮುಂಭಾಗ ದೀಪ ಪ್ರಜ್ವಲನೆ ನೆರವೇರಿಸಿ , ಪುಷ್ಪ ಚೆಲ್ಲಿ , ಮಾತನಾಡಿ , ಸಾತ್ವಿಕ ವ್ಯಕ್ತಿ , ಬಂಧುಗಳ ಹಾಗೇನೆ ಇದ್ದಂತವರು. ಬಹಳ ವರುಷದ ಗಾಢ ಸ್ನೇಹ ನಮ್ಮದು.ಸದಾ ಸಂತೋಷ ಭರಿತರು ಎಂದು ಗುಣಗಾನ ಮಾಡಿ ,ಶ್ರದ್ಧಾಂಜಲಿ ಸಲ್ಲಿಸಿದರು.

ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿ , ಬೇರೆ ,ಬೇರೆ ಸಂಘ ,ಸಂಸ್ಥೆ ಮೂಲಕ ನಾವು ಒಟ್ಟಿಗೆ ಕಾರ್ಯವೆಸಗಿದವರು. 33 ವರುಷಗಳ ಪರಿಚಯದಲ್ಲಿ ಅತ್ಯುತ್ತಮ ಮಾರ್ಗದರ್ಶಕರೂ , ಉತ್ತಮ ಕಾರ್ಯ ನಿರ್ವಾಹಕರು ಹಾಗೂ ಸಹಕಾರ ನೀಡಿದವರು. ಅವರ ಚುರುಕುತನ ,ಹುರುಪು ,ಮಾನವೀಯ ಗುಣಗಳನ್ನೂ ನಾವು ಮೈಗೂಡಿಸಿಕೊಳ್ಳ ಬೇಕೆಂದರು.

ದಾಸಪ್ಪ ರೈ ಮಾತನಾಡಿ , ಆರು ದಶಕಗಳ ಸಮೀಪದ ಗೆಳೆತನ ,ಒಡನಾಟದಲ್ಲಿ ಕಿಂಚಿತ್ತೂ ಮನಸ್ತಾಪ ಹುಟ್ಟಲಿಲ್ಲ. ಎಳೆಯ ಪ್ರಾಯದಿಂದಲ್ಲೇ ಕಠಿಣ ಶ್ರಮಜೀವಿಯಾಗಿದ್ದಂತಹ ವ್ಯಕ್ತಿ. ಎಷ್ಟೇ ಎತ್ತರ ಬೆಳೆದರೂ ,ಬಂದ ದಾರಿಯನ್ನೆಂದು ಮರೆಯದಂತಹ ವ್ಯಕ್ತಿ ಜೊತೆಗೆ ಒಡಿಯೂರು ಶ್ರೀ ಗಳ ಪರಮ ಭಕ್ತರೂ ಕೂಡ ನಮ್ಮ ದೇಪಪ್ಪ ನೋಂಡರು.ಧಾರ್ಮಿಕ ಕಾರ್ಯದಲ್ಲಿ ಸದಾ ಮೊದಲಿಗರು ,ಶುದ್ಧ ಹಸ್ತ ,ನಿರ್ಮಲ ಹೃದಯದ ವ್ಯಕ್ತಿಯಾಗಿದ್ದರೆಂದು ನುಡಿದರು.


ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಮಾತನಾಡಿ , ಜೀವನವೊಂದು ಖುಷಿ ,ದುಖದ ವರ್ತುಲವಾಗಿದ್ದು ,ಗುಳ್ಳೆ ಯಂತೇ ಎಂದೂ ಶಾಶ್ವತವಲ್ಲ. ಕಿರಿಯರಿಂದ ,ಹಿರಿಯರವರೆಗೆ ಯಾವ ರೀತಿ ,ಯಾರಲ್ಲಿ ಮಾತನಾಡಬೇಂದು ಚೆನ್ನಾಗಿ ತಿಳಿದಂತಹ ವ್ಯಕ್ತಿ ನೋಂಡರು. ಜವಾಬ್ದಾರಿಯುತ ಹುದ್ದೆ ನಿರ್ವಹಿಸುವ ಅವಕಾಶ ನೋಂಡರವರಿಗೆ ನೀಡ ಬೇಕೆಂದು ಶ್ರೀ ಗಳ ಹಂಬಲವಾಗಿತ್ತು ,ಆದರೆ ವಿಧಿಯಾಟ ಬೇರೆಯಾಗಿದೆ. ಮುಂದೆ ಆ ಕಾರ್ಯ ಪುತ್ರ ಸುಧೀರ್ ನೋಂಡ ನಿರ್ವಾಹಿಸಲಿದ್ದಾರೆಯೆಂದು ಶ್ರೀ ಗಳು ಹೇಳಿದ್ದಾರೆ. ಪರಲೋಕದಲ್ಲೂ ಅವರಿಗೆ ಸದ್ಗತಿ ಸಿಗಲಿಯೆಂದು ನುಡಿದರು.

ಗ್ರಾಮ ವಿಕಾಸ ನಿರ್ದೇಶಕ ಕಿರಣ್ , ದೇವಿ ಪ್ರಸಾದ್ ,ಗುರುದೇವಾ ಸೇವಾ ಬಳಗ ಉಪಾಧ್ಯಕ್ಷ ಕೆ.ಮೋನಪ್ಪ ಪೂಜಾರಿ ಕೂಡಾ ನುಡಿ ನಮನ ಸಲ್ಲಿಸಿದರು.

ವಜ್ರಮಾತಾ ವಿಕಾಸ ಕೇಂದ್ರ ಅಧ್ಯಕ್ಷೆ ನಯನಾ ರೈ ,ಕಾರ್ಯದರ್ಶಿ ಶಾರದಾ ಕೇಶವ ,ಗುರುದೇವಾ ಸೇವಾ ಬಳಗದ ಭವಾನಿ ಶಂಕರ್ ಶೆಟ್ಟಿ ,ಗ್ರಾ.ವಿ.ಯೋಜನೆ ಮೇಲ್ವಿಚಾರಕಿ ಸವಿತಾ ರೈ , ಒಡಿಯೂರ್ ಸಹಕಾರಿ ಮ್ಯಾನೇಜರ್ ಪವಿತ್ರ ಮತ್ತು ನಿರ್ದೇಶಕ ಜಯಪ್ರಕಾಶ್ ನೂಜಿಬೈಲು ಹಾಗೂ ದೇವಪ್ಪ ನೋಂಡ ಇವರ ಪುತ್ರ ಸುಧೀರ್ ನೋಂಡ ಸಹಿತ ಸೇವಾ ಬಳಗ ,ವಿಕಾಸ ಕೇಂದ್ರ ,ಗ್ರಾ.ವಿ.ಯೋಜನೆ ಹಾಗೂ ಸಹಕಾರಿಯ ಎಲ್ಲಾ ಸಿಬಂದಿಗಳು ಉಪಸ್ಥಿತರಿದ್ದರು. ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ನಿರೂಪಿಸಿದರು.

LEAVE A REPLY

Please enter your comment!
Please enter your name here