ಪುತ್ತೂರು: ನಿಡ್ಪಳ್ಳಿ ಗ್ರಾಮದ ನುಳಿಯಾಲು ತರವಾಡು ಶ್ರೀ ಧರ್ಮಚಾವಡಿ ಇದರ ಕಾಲಾವಧಿ ನೇಮೋತ್ಸವ ಎ. 22 ರಿಂದ 23 ರತನಕ ನುಳಿಯಾಲು ತರವಾಡು ಮನೆಯಲ್ಲಿ ನಡೆಯಲಿದೆ.
ಎ. 22 ರಂದು ಪೂರ್ವಾಹ್ನ ಗಣಹೋಮ, ನಾಗತಂಬಿಲ, ಕುಣಿತ ಭಜನೆ, ಶ್ರೀ ವೆಂಕಟರಮಣ ದೇವರಿಗೆ ಹರಿಸೇವೆ, ಮದ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ 2 ರಿಂದ 5 ರತನಕ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ದೈವಗಳ ಭಂಡಾರ ಇಳಿಯುವುದು ಮತ್ತು ಎಣ್ಣೆಬೂಳ್ಯ, ಬಳಿಕ ರಾಜನ್ ದೈವ ಪಿಲಿಭೂತ ಮತ್ತು ಜುಮಾದಿ ದೈವದ ನೇಮ ನಡೆಯಲಿದೆ ಬಳಿಕ ಅನ್ನಸಂತರ್ಪಣೆ, ರಾತ್ರಿ ವರ್ಣಾರ ಪಂಜುರ್ಲಿ, ಪಂಜುರ್ಲಿ, ಕಲ್ಲುರ್ಟಿ ಮೂಕಾಂಬಿಕಾ ಗುಳಿಗ ನೇಮೋತ್ಸವ ನಡೆಯಲಿದೆ.
ಎ. 23 ರಂದು ಉಷಾ ಕಾಲ ಗಂಟೆ 5 ಕ್ಕೆ ರಕ್ತೇಶ್ವರಿ ದೈವದ ನೇಮ, ಪೂರ್ವಾಹ್ನ ಧರ್ಮದೈವ ಜೀರ್ಣಾಳ್ವ ದೈವದ ನೇಮ, ಮದ್ಯಾಹ್ನ ಗುಳಿಗ ದೈವದ ಕೋಲ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ನುಳಿಯಾಲು ತರವಾಡು ಬಾರಿಕೆ ಟ್ರಸ್ಟ್ನ ಅಧ್ಯಕ್ಷ ಹಾಗೂ ಯಜಮಾನ ಜಗನ್ನಾಥ ರೈ ನುಳಿಯಾಲು ಹಾಗೂ ಸಮಸ್ತ ಕುಟುಂಬಸ್ಥರು ಮತ್ತು ಬಂಧುಗಳು ತಿಳಿಸಿದ್ದಾರೆ.