ಪುತ್ತೂರು ಜಾತ್ರೆ – ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಲುವಾಗಿ ದೇವಳದ ಎದುರು ಗದ್ದೆಯಲ್ಲಿ ನಡೆಯುತ್ತಿರುವ “ಶಿವಾರ್ಪಣಂ” ಸಾಂಸ್ಕೃತಿಕ ವೈವಿಧ್ಯ ಕಾರ್ಯ ಕ್ರಮದ ಸಮಾರೋಪವು ಎ.20ರಂದು ನಡೆಯಿತು.

ಕೃಷ್ಣವೇಣಿ ಮುಳಿಯ, ಡಾ. ವಿಜಯ ಸರಸ್ವತಿ, ಮಾಲಿನಿ ಮತ್ತು ಭಂಡಾರ್ಕರ್ ನೆಲ್ಲಿಕಟ್ಟೆ ಓಂಕಾರ ಮತ್ತು ಶಂಖನಾದಗೈದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ರವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಐತಪ್ಪ ನಾಯ್ಕ್ ರಾಮ ದಾಸ್ ಗೌಡ ಇವರು ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕರೂ ಮತ್ತು ಸಮಿತಿ ಸದಸ್ಯರಾಗಿರುವ ವೇ ಮೂ ವಿ ಎಸ್ ಭಟ್ ರವರು ಮಂಗಳಾರತಿ ಬೆಳಗಿದರು.

ಸಾಂಸ್ಕೃತಿಕ ಉಪಸಮಿತಿಯ ಸದಸ್ಯರಾದ ಸುಬ್ಬಪ್ಪ ಕೈಕಂಬ ಇವರು ಸಮಾರೋಪದ ನುಡಿಗಳನ್ನಾಡಿದರು. ಸರಳ ಸಮಾರೋಪ ಸಮಾರಂಭದ ಬಳಿಕ ಥಂಡರ್ ಕಿಡ್ಸ್ ತಂಡದಿಂದ ವಾದ್ಯಗೋಷ್ಟಿ, ಗಡಿನಾಡ ಕನ್ನಡ ಸಾಹಿತ್ಯ ಸಂಘ, ಕಾಸರಗೋಡು ಇವರಿಂದ ನೃತ್ಯ ಸಂಭ್ರಮ, ಶ್ರೀ ಹರಿ ಭಟ್ ಪೆರ್ಲ ಅವರಿಂದ ಗಮಕ, ನಾಟ್ಯ ನಿಲಯಂ ಮಂಜೇಶ್ವರ ಭರತನಾಟ್ಯ ಪ್ರದರ್ಶಿಸಲ್ಪಟ್ಟಿತು.

ಮೌನೇಶ್ ವಿಶ್ವಕರ್ಮ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮತ್ತು ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಉಪಸಮಿತಿಯ ಸದಸ್ಯರಾದ ಸುರೇಶ್ ಶೆಟ್ಟಿ, ಪ್ರೊ ವಿ ಜಿ ಭಟ್, ಡಾ ಶಶಿಧರ್ ಕಜೆ, ಡಾ| ರಾಜೇಶ್ ಬೆಜ್ಜಂಗಳ, ಲಕ್ಷ್ಮೀ ವಿ ಜಿ ಭಟ್, ವಿದುಷಿ ಪ್ರೀತಿಕಲಾ, ಕೃಷ್ಣ ವೇಣಿ ಮುಳಿಯ, ಡಾ ವಿಜಯ ಸರಸ್ವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here