ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರ

0

ನೆಲ್ಯಾಡಿ: ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ 8 ಮತ್ತು 9ನೇ ತರಗತಿ ಮಕ್ಕಳಿಗೆ ಬೇಸಿಗೆ ಶಿಬಿರ ಎ.10ರಿಂದ 13ರ ತನಕ ನಡೆಯಿತು.


ಶಿಬಿರದ ಮೊದಲನೇಯ ದಿನದ ಮುಖ್ಯ ಅತಿಥಿಯಾಗಿದ್ದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆಯ ಚಿತ್ರಕಲಾ ಶಿಕ್ಷಕ ಶ್ರೀರಾಮರವರು ಶಿಬಿರ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳಿಗೆ ಮುಖವಾಡ, ಕೋಲಾಜ್ ಮತ್ತು ಪೇಪರ್ ಕ್ರಾಫ್ಟ್ ತಯಾರಿಕೆಯ ಬಗ್ಗೆ ತಿಳಿಸಿಕೊಟ್ಟರು. ಸಂಗೀತ ಶಿಕ್ಷಕಿ ಪ್ರತಿಭಾರವರು ಮಕ್ಕಳಿಗೆ ಸಂಗೀತ ಹಾಗೂ ತ್ಯಾಜ್ಯ ಬಟ್ಟೆಗಳಿಂದ ಮ್ಯಾಟ್ ತಯಾರಿಸುವಿಕೆಯ ಬಗ್ಗೆ ತಿಳಿಸಿಕೊಟ್ಟರು. ಶಿಬಿರದ ಎರಡನೆಯ ದಿನದಂದು ಪುತ್ತೂರು ತಾಲೂಕಿನ ಪ್ರೌಢಶಾಲಾ ವಿಭಾಗದ ಸಂಯೋಜಕರಾದ ಹರಿಪ್ರಸಾದ್‌ರವರು ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆಯ ಕುರಿತು ವಿವಿಧ ಕಥೆಗಳನ್ನು ಹೇಳುವುದರೊಂದಿಗೆ ನೈತಿಕ ಶಿಕ ಣದ ಮಹತ್ವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮತದಾನದ ಮಹತ್ವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ನಂತರ ಶಿಕ್ಷಕಿಯರು ಮಕ್ಕಳಿಗೆ ಪ್ಲಾಸ್ಟಿಕ್ ಬಾಟಲ್ ಮತ್ತು ಬಣ್ಣದ ಕಾಗದಗಳಿಂದ ಅಲಂಕಾರಿಕ ವಸ್ತು ತಯಾರಿಕೆಯ ಕುರಿತು ತಿಳಿಸಿಕೊಟ್ಟರು. ಅಪರಾಹ್ನದ ನಂತರದ ಅವಧಿಯಲ್ಲಿ ಶಾಂತಿನಗರ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಬಾಕಿಲರವರು ಮಕ್ಕಳಿಗೆ ಭಾಷಣ ಮತ್ತು ಸಂವಹನ ಕಲೆಗಳ ಬಗ್ಗೆ ಚಟುವಟಿಕೆಯ ಮೂಲಕ ಮಾಹಿತಿಯನ್ನು ನೀಡಿದರು.

ಶಿಬಿರದ ಮೂರನೆಯ ದಿನದಂದು ಕ್ಷೇತ್ರ ಸಂದರ್ಶನಕ್ಕಾಗಿ ಕೊಯಿಲ ಫಾರ್ಮ್‌ಗೆ ಭೇಟಿ ನೀಡಲಾಯಿತು. ಅಲ್ಲಿನ ಪಶು ವೈದ್ಯಾಧಿಕಾರಿಯಾದ ಅಪರ್ಣಾರವರು ಹಾಲು ಉತ್ಪಾದನೆ, ಬೇರೆ ಬೇರೆ ತಳಿಯ ಹಸುಗಳು ಹಾಗೂ ಪಶುಸಂಗೋಪನೆಯ ಬಗ್ಗೆ ಮಾಹಿತಿ ನೀಡಿದರು. ಹೈನುಗಾರಿಕೆ, ಕೋಳಿಸಾಕಾಣ ಕೆಯ ಬಗ್ಗೆ, ಮಕ್ಕಳಿಗೆ ಭವಿಷ್ಯದಲ್ಲಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಅಪರಾಹ್ನದ ಅವಧಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರಮೇಶ್ ಮಯ್ಯರವರು ದೇಶ ಭಕ್ತಿಗೀತೆ, ಭಕ್ತಿಗೀತೆ ಹಾಗೂ ಭಾವಗೀತೆಗಳನ್ನು ಹಾಡಿ ಮಕ್ಕಳಿಗೆ ಅಭ್ಯಾಸ ಮಾಡಿದರು. ಶಿಬಿರದ ನಾಲ್ಕನೆಯ ದಿನದಂದು ವಿದ್ಯಾರ್ಥಿಗಳಿಗೆ ಬೆಂಕಿಯಿಲ್ಲದ ಅಡುಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಈ ದಿನ ಮಕ್ಕಳು ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ರುಚಿಕರವಾಗಿ ತಯಾರಿಸಿದರು. ಅನಂತರ ಅಧ್ಯಾಪಕರು ಮಕ್ಕಳು ತಯಾರಿಸಿರುವ ತಿಂಡಿ ತಿನಿಸುಗಳ ರುಚಿ ನೋಡಿ ಮೂರು ತಂಡಗಳನ್ನು ಆಯ್ಕೆ ಮಾಡಿ, ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು.


ಸಮರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ದುಗ್ಗಪ್ಪ ಗೌಡ ಅಗರ್ತಿಮಾರುರವರು ಶುಭ ಹಾರೈಸಿದರು. ಶಾಲಾ ಮುಖ್ಯಗುರು ರಮೇಶ್ ಮಯ್ಯರವರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಮೂರು ದಿನಗಳಲ್ಲಿ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನವನ್ನು ಮಾಡಲಾಯಿತು. ಮಕ್ಕಳು ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ಹಾಗೂ ಶಿಬಿರದ
ವರದಿಯನ್ನು ವಾಚಿಸಿದರು. ಪ್ರತಿದಿನ ಬೆಳಿಗ್ಗಿನ ಅವಧಿಯಲ್ಲಿ ಯೋಗಾಸನ ಹಾಗೂ ಪ್ರಾಣಾಯಾಮಗಳನ್ನು ಹಿಂದಿ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿಯವರು ನಡೆಸಿಕೊಟ್ಟರು. ಪ್ರತಿದಿನ ಶಿಕ್ಷಕರಾದ ಚರಣ್, ಜಯಲಕ್ಷ್ಮಿ, ವಿಜಯಲಕ್ಷ್ಮಿ, ಮಂಜುಳ ಮತ್ತು ಸುಜಾತರವರು ಕಾರ್ಯಕ್ರಮ ನಿರೂಪಣೆ, ಸ್ವಾಗತ ಹಾಗೂ ಧನ್ಯವಾದ ಮಾಡಿದರು.

LEAVE A REPLY

Please enter your comment!
Please enter your name here