ಕೂವೆಮಠ ನರಸಿಂಹ ಕ್ಷೇತ್ರದ ಬ್ರಹ್ಮಕಲಶೋತ್ಸವ-ಪೂರ್ವಭಾವಿ ಸಭೆ

0

ನೆಲ್ಯಾಡಿ: ಜೀರ್ಣೋದ್ಧಾರಗೊಂಡಿರುವ ಬಜತ್ತೂರು ಗ್ರಾಮದ ಕೂವೆಮಠ(ಶಿವತ್ತಮಠ) ಶ್ರೀ ನರಸಿಂಹ ಕ್ಷೇತ್ರದ ಬ್ರಹ್ಮಕಲಶೋತ್ಸವ ಮೇ ೨೭ರಿಂದ ೨೯ರ ತನಕ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಎ.20ರಂದು ಕೂವೆಮಠ(ಶಿವತ್ತಮಠ)ದಲ್ಲಿ ನಡೆಯಿತು.


ಬಜತ್ತೂರು, ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮದ ಭಕ್ತರನ್ನು ಸೇರಿಸಿಕೊಂಡು ಬ್ರಹ್ಮಕಲಶೋತ್ಸವದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ಸಭೆಯಲ್ಲಿ ರಚಿಸಲಾಯಿತು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷೆ ಶ್ರೀಮತಿ ವಿಜಯ ಎಂ.ಶೆಟ್ಟಿ ಒಡ್ಯಮೆ ಎಸ್ಟೇಟ್‌ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು, ಉಪಾಧ್ಯಕ್ಷ ಗುರುಪ್ರಸಾದ ರಾಮಕುಂಜ, ಪ್ರಧಾನ ಕಾರ್ಯದರ್ಶಿ ರಂಜಿತ್ ಜೈನ್ ಮೇಲೂರು, ಕಾರ್ಯದರ್ಶಿ ಚಂದ್ರಶೇಖರ ಶಿವತ್ತಮಠ, ಜೊತೆ ಕಾರ್ಯದರ್ಶಿ ಮಹೇಶ ಪಾತೃಮಾಡಿ ಅವರು ವಿವಿಧ ಸಲಹೆ ಸೂಚನೆ ನೀಡಿ, ಸಮಿತಿಯವರ ಜವಾಬ್ದಾರಿಯ ಕುರಿತು ಮಾಹಿತಿ ನೀಡಿದರು. ರಾಮಕುಂಜ ಗ್ರಾ,ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.ಕದ್ರ, ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಬಜತ್ತೂರು ಗ್ರಾ.ಪಂ.ಸದಸ್ಯ ಗಂಗಾಧರ ಕೆ.ಎಸ್., ಮಾಜಿ ಸದಸ್ಯ ಆನಂದ ಮೇಲೂರು, ಗ್ರಾಮಸ್ಥರಾದ ಪದ್ಮಯ್ಯ ಗೌಡ ಡೆಂಬಳೆ, ಪವನ್ ಮೇಲೂರು, ಸುರೇಶ್ ಬಿದಿರಾಡಿ, ಅಣ್ಣುಗೌಡ ಶಿವತ್ತಮಠ, ಆನಂದ ಶಿವತ್ತಮಠ, ಗಿರಿಜ ಒಡ್ಯಮೆ, ಸಚಿನ್ ಒಡ್ಯಮೆ, ದರ್ಶನ್ ಶಿವತ್ತಮಠ, ಲಕ್ಷ್ಮಣ ಶಿವತ್ತಮಠ, ಪ್ರಕಾಶ್ ಬಿ., ನವೀನ ಎಂ.,ರಾಜೇಶ್, ತಿಮ್ಮಪ್ಪ ಹೊಸ ಒಕ್ಕಲು, ಪೂವಪ್ಪ ಒಡ್ಯಮೆ, ನಾರಾಯಣ ಶೆಟ್ಟಿ ಮೇಲೂರು, ಸುಶೀಲ, ನೀಲಾವತಿ, ರುಕ್ಮಿಣಿ ಶಿವತ್ತಮಠ, ದಿನೇಶ್ ಎಂ.ಮೇಲೂರು, ಪುಷ್ಪಾ, ಶಶಿಕಲಾ, ರಕ್ಷಿತಾ, ವಿಜಯ ಎಂ.ಡಿ., ಸುಜಾತ ಎಂ., ರೂಪಶ್ರೀ ವಿಜಯ, ಓಬಯ್ಯ ಪರವ ಮೇಲೂರು, ಜಯಂತ, ರೋಹಿತ್, ಚರಣ್ ಪಿ., ನವೀನ್‌ಕುಮಾರ್, ರಾಮಣ್ಣ ನಾಯ್ಕ್, ವಿಶಾಲಾಕ್ಷಿ, ಆನಂದ ಪೆರ್ನಾರ್, ರಾಮಣ್ಣ ಗೌಡ, ಪದ್ಮನಾಭ ಪೆರ್ನಾರ್, ನೋಣಪ್ಪ, ದಿನೇಶ್ ಅರಮ, ಮೋನಪ್ಪ ಅರಮ, ಬಾಲಪ್ಪ, ಸತೀಶ್ ಗೌಡ ಮೇಲೂರು, ಮೋನಪ್ಪ ಗೌಡ ಒಡ್ಯಮೆ, ವಿಠಲ ಪೂಜಾರಿ ಮೇಲೂರು, ಸಂದೀಪ್, ಅರುಣ್ ಗೌಡ, ಇಂದಿರಾ, ಸೇಸಮ್ಮ ಸೇರಿದಂತೆ ಹಲವು ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here