ವಿಧಾನಸಭಾ ಚುನಾವಣೆ-ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಯ ಬ್ರೌಷರ್ ಬಿಡುಗಡೆ

0

ಮಂಗಳೂರು:ಮೇ 10ರಂದು ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದ.ಕ. ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನದ ಬಗ್ಗೆ ಜನಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳ ಬ್ರೌಷರ್ ಬಿಡುಗಡೆಗೊಳಿಸಲಾಗಿದೆ. ದ.ಕ.ಜಿಲ್ಲಾ ಪಂಚಾಯತ್ ವಿಸಿ ಹಾಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಎಲ್.ಕೆ. ಅವರು ಬಿಡುಗಡೆ ಮಾಡಿದರು. ಈ ಸಂದರ್ಭ ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್, ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎಸ್.,ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಮತದಾನದ ಉದ್ದೇಶಗಳು, ಜಿಲ್ಲೆಯ ಜನಸಂಖ್ಯೆ, ಕಳೆದ ಬಾರಿ ಜಿಲ್ಲೆಯ 8 ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನದ ಶೇಕಡಾವಾರು ಪಟ್ಟಿ, ಜನರಿಗೆ ಸಮಗ್ರ ಮಾಹಿತಿ ನೀಡಲು ರಚಿಸಿದ ವಿವಿಧ ಜಾಗೃತಿ ತಂಡಗಳ ವಿವರ, ಈ ಬಾರಿಯ ವಿಶೇಷ ಆಕರ್ಷಣೆಯಾದ ಸ್ನೇಹಕರ ಮತ್ತು ಆಹ್ಲಾದಕರ ಅನುಭವವನ್ನು ನೀಡುವ 9 ವಿಷಯವನ್ನೊಳಗೊಂಡ ಮಾದರಿ ಮತಗಟ್ಟೆಗಳು, ಜಿಲ್ಲಾ ಚುನಾವಣಾ ರಾಯಭಾರಿಗಳ ವಿವರ ಹಾಗೂ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡ ವಿನೂತನ ಚಟುವಟಿಕೆಗಳ ಛಾಯಾಚಿತ್ರಗಳ ಮಾಹಿತಿಯು,4 ಪುಟಗಳ ಬ್ರೌಷರ್‌ನಲ್ಲಿದೆ.

LEAVE A REPLY

Please enter your comment!
Please enter your name here