ಬಡಗನ್ನೂರುಃ ಬಡಗನ್ನೂರು ಗ್ರಾಮದ ಪಟ್ಟೆ ಎಂಬಲ್ಲಿರುವ ಪಾಳು ಬಿದ್ದ ಕಿಂಡಿ ಅಣೆಕಟ್ಟನ್ನು ತೆರವುಗೊಳಿಸುವಂತೆ ದ ಕ ಜಿಲ್ಲಾಧಿಕಾರಿ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದರೂ ತೆರವಿಗೆ ಕ್ರಮ ಕೈಗೊಳ್ಳದೆ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ
ಪಟ್ಟೆಯಲ್ಲಿರುವ ಈ ಕಿಂಡಿ ಅಣೆಕಟ್ಟು ಅತ್ಯಂತ ಹಳೆಯದಾಗಿದ್ದು, ಉಪಯೋಗ ಶೂನ್ಯವಾಗಿತ್ತು.ಸುಮಾರು 50 ವರ್ಷಗಳ ಹಿಂದೆ ಕೃಷಿ ಬಳಕೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಾಣಮಾಡಲಾಗಿತ್ತು.ಸೂಕ್ತ ನಿರ್ವಾಹಣೆಯಿಲ್ಲದೆ ಅಣೆಕಟ್ಟು ಪಾಲುಬಿದ್ದಿತ್ತು .ಮಳೆಗಾಲದಲ್ಲಿ ತ್ಯಾಜ್ಯಗಳು ಅಣೆಕಟ್ಟುಬಳಿ ರಾಶಿ ಬಿದ್ದು ಮಳೆ ನೀರು ಹರಿದು ಪಕ್ಕದ ರಸ್ತೆ ಮತ್ತು ಕೃಷಿ ತೋಟಗಳಿಗೆ ತೊಂದರೆಯಾಗುತಿತ್ತು.ಅಣೆಕಟ್ಟು ದುರಸ್ತಿ ಮಾಡಲು ಮತ್ತು ಹಲಗೆ ಜೋಡಿಸಲು ಇಲಾಖೆಯಿಂದ ಅನುದಾನ ನೀಡುತ್ತಿರಲಿಲ್ಲ. ಈ ಕಾರಣಕ್ಕೆ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.ಈ ಬಗ್ಗೆ ಇತ್ತೀಚೆಗೆ ಬಡಗನ್ನೂರು ಗ್ರ್ರಾ.ಪಂ ವ್ಯಾಪ್ತಿಯ ಸುಳ್ಳಪದವು ಗ್ರಾಮವಾಸ್ತವ್ಯ ಹೂಡಿದ್ದ ದ ಕ ಜಿಲ್ಲಾಧಿಕಾಗಳಲ್ಲಿ ಕಿಂಡಿ ಅಣೆಕಟ್ಟನ್ನು ತೆರವುಮಾಡುವಂತೆ ಮನವಿ ಮಾಡಿದ್ದರು.ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಂದ ಮಾಹಿತಿ ಪಡೆದು ,ಕಿಂಡಿ ಅಣೆಕಟ್ಟನ್ನು ತೆರವು ಮಾಡುವಂತೆ ಸೂಚನೆ ನೀಡಿದ್ದಾರೆ.
ಕಿಂಡಿ ಅಣೆಕಟ್ಟಿ ತೆರವು ಮಾಡಿದರೆ ಮಳೆಗಾಲದಲ್ಲಿ ಮಳೆ ನೀರು ರಸ್ತೆ ಮೇಲೆ ಹರಿಯುವುದು ಮತ್ತು ಕೃಷಿ ತೋಟಗಳಿಗೆ ನುಗ್ಗುವುದನ್ನು ತಡೆಯಬಹುದಾಗಿದೆ ಎಂದು ಕೃಷಿಕರು ಮಾಹಿತಿ ನೀಡಿದ್ದು ತೆರವಿಗೆ ಸೂಚನೆ ನೀಡಿದ್ದರು ಆದರೆ ಸೂಚನೆ ನೀಡಿ ಹತ್ತಿರ ಹತ್ತಿರ ಒಂದು ವರ್ಷ ವಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಯಾವುದೇ ಯಾವುದೇ ಕ್ರಮ ಕೈಗೊಳ್ಳದೆ ಜಿಲ್ಲಾಧಿಕಾರಿಗಳ ಸೂಚನೆಯನ್ನು ಉಲ್ಲಂಘನೆ ಮಾಡಿದ್ದಾರೆ.ಈ ಬಗ್ಗೆ .ಸಂಬಂಧ ಇಲಾಖೆ ಅಧಿಕಾರಿಗಳು ಗಮನಿಸಿ ಮಳೆಗಾಲ ಪ್ರಾರಂಭದ ಮೊದಲು ಪಾಳು ಬಿದ್ದ ಕಿಂಡಿ ಅಣೆಕಟ್ಟು ತೆರವು ಗೊಳಿಸಿ ಕೃಷಿಕರಿಗೆ ಆಗುವ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.