ದ್ವಿತೀಯ ಪಿಯುಸಿ ಫಲಿತಾಂಶ:ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿಗೆ 100% ಫಲಿತಾಂಶ

0

ಡಿಸ್ಟಿಂಕ್ಷನ್:26 ; ಪ್ರಥಮ ಶ್ರೇಣಿ:43

ಪುತ್ತೂರು: 2022-23ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜು ಶೇ.100 ಫಲಿತಾಂಶದ ಸಾಧನೆ ಮಾಡಿದೆ.
ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 77 ವಿದ್ಯಾರ್ಥಿನಿಯರಲ್ಲಿ 77 ವಿದ್ಯಾರ್ಥಿನಿಯರು ಕೂಡಾ ತೇರ್ಗಡೆಗೊಂಡಿದ್ದಾರೆ.
26 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದು, 43 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ, 5 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ಹಾಗೂ ಮೂವರು ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗ:
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲಾ 55 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರಾದ ಫಾತಿಮತ್ ರುಬೀನಾ(573), ಫಾತಿಮತ್ ಶಮ್ನಾ ಎ.ಐ(569), ರಶಾನಾ ತಝ್ನೀಂ ಕೆ.ಆರ್(565), ಫಾತಿಮತುಲ್ ಮುಫೀದಾ(562), ಆಯಿಶಾ(562), ಅಲ್‌ಶಿಫಾ(557), ಉಮ್ಮುನೂಹಾ ಎಚ್.ಎ(557), ಫಾತಿಮಾ ಸಮೀಮಾ(557), ಸೈನಾಝ್(556), ಫಾತಿಮತ್ ಸುಫೈರತ್(545) ಆಯಿಶಾ ಇಶ್ರತ್(539), ರಸೀನಾ ಸಂಶಾದ್(537), ಫಾತಿಮತ್ ಮುಸೀನಾ(533), ಆಯಿಶತುಲ್ ರಂಝೀನಾ(532), ರುಫೈದಾ ಎ(532), ಇಸ್ಮತ್(531), ಫಾತಿಮತ್ ಸನಾ(530), ರಿಝ್ವಾನಾ(527), ಸಲ್ಮತ್ ಶಾಕಿರಾ(527), ಆಯಿಶತ್ ಸುಹೈಲಾ ಎಂ.ಎ(527), ರಹ್ಮತ್(521), ಫಾತಿಮತ್ ರಝೀನಾ(511)
ಅಂಕಗಳೊAದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.
ಉಳಿದಂತೆ 30 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ, ಓರ್ವ ವಿದ್ಯಾರ್ಥಿನಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಕಲಾ ವಿಭಾಗ:
ಕಲಾ ವಿಭಾಗದಲ್ಲಿ ಒಟ್ಟು 22 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು ಆ ಪೈಕಿ ನಾಲ್ಕು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಫಾತಿಮತ್ ಅಫೀಫಾ(560), ಫಾತಿಮತ್ ಅಫ್ರತ್(537), ಫಿಝಾ(531), ಫಾತಿಮತ್ ಶಾಹಿದಾ(530) ಅಂಕಗಳೊAದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

ಉಳಿದಂತೆ 13 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ನಾಲ್ಕು ಮಂದಿ ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿನಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ

LEAVE A REPLY

Please enter your comment!
Please enter your name here