ಪುತ್ತೂರು: 2023ನೇ ಮಾರ್ಚ್ ತಿಂಗಳಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆಸಲ್ಪಟ್ಟ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಿಂದ ಹಾಜರಾದ ಒಟ್ಟು 500 ವಿದ್ಯಾರ್ಥಿಗಳಲ್ಲಿ 464 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಾಲೇಜಿನ ಸರಾಸರಿ ಫಲಿತಾಂಶವು ಶೇಕಡಾ 93 ಆಗಿದ್ದು ಸಾರ್ವಕಾಲಿಕ ದಾಖಲೆಯನ್ನು ಪಡೆದುಕೊಂಡಿದೆ. 62 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 98 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 96 ಮಂದಿ ಉತ್ತೀರ್ಣರಾಗಿ ಶೇ. 98, ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 288 ವಿದ್ಯಾರ್ಥಿಗಳ ಪೈಕಿ 269 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 93 ಹಾಗೂ ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 114 ವಿದ್ಯಾರ್ಥಿಗಳ ಪೈಕಿ 99 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 87 ಫಲಿತಾಂಶ ಪಡೆದುಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಲಿಖಿತಾ ಆರ್. ರವರು 570 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.ನೈತ್ತಾಡಿ ಚಂದ್ರಶೇಖರ ಮತ್ತು ಗಿರಿಜಾ ದಂಪತಿಯ ಪುತ್ರಿಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 568 ಅಂಕ ಪಡೆದು ವೀಕ್ಷಿತಾ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಈಕೆ ನೇರಳಕಟ್ಟೆ ಪರ್ಲೊಟ್ಟು ಶೇಖರ ಮತ್ತು ಉಷಾ ದಂಪತಿಯ ಪುತ್ರಿಯಾಗಿದ್ದಾರೆ. ಕಲಾ ವಿಭಾಗದಲ್ಲಿ 565 ಅಂಕ ಪಡೆದಿರುವ ತೃಪ್ತಿ ಕುದ್ಕೊಳಿ ಯವರು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಈಕೆ ಸಂಪ್ಯ ನಿವಾಸಿ ನಿವೃತ್ತ ಸೈನಿಕ ಚಂದ್ರಶೇಖರ ಮತ್ತು ಶೀಲಾವತಿ ದಂಪತಿಯ ಪುತ್ರಿಯಾಗಿದ್ದಾರೆ.
ದಾಖಲೆಯ ಫಲಿತಾಂಶ ನೀಡಿರುವ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ. ಧರ್ಣಪ್ಪ ಗೌಡರವರು ಅಭಿನಂದಿಸಿದ್ದಾರೆ.