ಪುತ್ತೂರು: 2023 ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು,ತೆಂಕಿಲ ನರೇಂದ್ರ ಪ.ಪೂ.ಕಾಲೇಜಿನ ವಾಣಿಜ್ಯ ವಿಭಾಗದ ಕು, ಪಲ್ಲವಿ 593(98.83%) ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಪಲ್ಲವಿ ಇವರು ಲೆಕ್ಕಶಾಸ್ತ್ರ-100,ಅರ್ಥಶಾಸ್ತ್ರ-100,ಸಂಸ್ಕೃತ-100,ಸಂಖ್ಯಾಶಾಸ್ತ್ರ-99,ವ್ಯವಹಾರ ಅಧ್ಯಯನ-99,ಇಂಗ್ಲಿಷ್-95 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆಯನ್ನು ಮಾಡಿರುವುದರ ಜೊತೆಗೆ ರಾಜ್ಯಕ್ಕೆ ಐದನೇ ಸ್ಥಾನವನ್ನು ಪಡೆದಿರುತ್ತಾರೆ.ಈಕೆ ಪುತ್ತೂರಿನ ಪರ್ಲಡ್ಕ ನಿವಾಸಿಯಾದ ದೇವದಾಸ ಕಿಣಿ ಮತ್ತು ಶ್ರೀಮತಿ ಗೀತಾ ಕಿಣಿ ದಂಪತಿಗಳ ಪುತ್ರಿ.
ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು .ಈ ಸಮಾರಂಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಇವರು ಸನ್ಮಾನಿಸಿ ಶುಭಹಾರೈಸಿದರು,ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ,ಸಂಚಾಲಕರಾದ ಸಂತೋಷ ಬಿ.,ಸದಸ್ಯರಾದ ಸಂಪತ್ ಕುಮಾರ್,ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ,ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ವಿದ್ಯಾರ್ಥಿನಿಯಾದ ಕು. ಪಲ್ಲವಿ ಅವರನ್ನು ಅಭಿನಂದಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದರು.