ಎ.22: ವೇದವ್ಯಾಸ ರಾಮಕುಂಜ ಅವರ ಮನೆ ಶ್ರೀಮಾ’ದಲ್ಲಿ ಅಕ್ಷಯ ತೃತೀಯಾ ಹಬ್ಬ

0

ಪುತ್ತೂರು: ವಿವೇಕಾನಂದ ಕಾಲೇಜ್‌ನ ನಿವೃತ್ತ ಪ್ರಾಂಶುಪಾಲ ವೇದವ್ಯಾಸ ರಾಮಕುಂಜ ಅವರ ಮನೆಶ್ರೀಮಾ’ ದಲ್ಲಿ ಎ.22ರಂದು ಸಂಜೆ 4 ಗಂಟೆಗೆ `ಅಕ್ಷಯ ತೃತೀಯ’ ಹಬ್ಬ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಕ್ಷಯ ಪ್ರಶಸ್ತಿ, ಗುರುವಂದನೆ, ಶಿಷ್ಯ ಸಂಮಾನ ನಡೆಯಲಿದೆ.


ವಿವೇಕಾನಂದ ಕಾಲೇಜ್‌ನ ನಿವೃತ್ತ ಪ್ರಾಧ್ಯಾಪಕ ವಿ.ಬಿ. ಅರ್ತಿಕಜೆ, ಹಿರಿಯ ಸಾಹಿತಿ ಲೇಖಕಿ ಎ.ಪಿ. ಮಾಲತಿ, ಹಿರಿಯ ಯಕ್ಷಗಾನ ಅರ್ಥಧಾರಿ ಭಾಸ್ಕರ ಬಾರ್ಯ, ವೇ.ಮೂ. ರಾಘವೇಂದ್ರ ಉಡುಪ, ಮಾಸ್ಟರ್ ಪ್ಲಾನರಿಯ ಆನಂದ ಕುಮಾರ್ ಎಸ್.ಕೆ, ಪಾಕ ಶಾಸ್ತ್ರಜ್ಞ ರಾಮ ಭಟ್, ಸುದ್ದಿ ಬಿಡುಗಡೆಯ ಡಾ. ಯು.ಪಿ. ಶಿವಾನಂದ ಅವರಿಗೆ ಅಕ್ಷಯ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.


ನಿವೃತ್ತ ಮುಖ್ಯಗುರು ನಾರಾಯಣ ರೈ, ನಿವೃತ್ತ ಪ್ರಾಧ್ಯಾಪಕ ರಾಮಕೃಷ್ಣ ಭಟ್, ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಯಂ.ಸುಬ್ರಹ್ಮಣ್ಯ ಕೆದಿಲಾಯ ಅವರಿಗೆ ಗುರುವಂದನೆ ನಡೆಯಲಿದೆ. ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಶ್ರೀರಾಮ ಭಟ್ ಟಿ, ಪೊಲೀಸ್ ಉಪ ಅಧೀಕ್ಷಕ ವಿಜಯ ಪ್ರಸಾದ್ ಮತ್ತು ಭಾರತ ಸೇವಾಶ್ರಮದ ಈಶ್ವರ ಭಟ್ ಅವರಿಗೆ ಶಿಷ್ಯ ಸಂಮಾನ ನಡೆಯಲಿದೆ.


ಮುಂಬಯಿ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥ ತಾಳ್ತಜೆ ವಸಂತ ಕುಮಾರ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಸಂಜೆ 5 ಗಂಟೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕು. ಭಾಮಿನಿ ಕೆ ಭಟ್ ಹಾಡುಗಾರಿಕೆ. ಕು. ತನ್ಮಯಿ ಉಪ್ಪಂಗಳ ವಯಲಿನ್, ಅಮೃತ ನಾರಾಯಣ ಹೊಸಮನೆ ಮೃದಂಗ, ಬಾಲಕೃಷ್ಣ ಹೊಸಮನೆ ಮೋರ್ಸಿಂಗ್ ಸಾಥ್ ನೀಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಬಿ.ಎಂ. ಭಟ್, ನಿವೇದಿತಾ ವಿ ರಾಮಕುಂಜ, ಪ್ರಾಧ್ಯಾಪಕಿ ವಿಜಯ ಸರಸ್ವತಿ ನಿರ್ವಹಿಸಲಿದ್ದಾರೆ. ಸಂಜೆ 7.30ಕ್ಕೆ ವೈಶಾಖ ಮಧುಸೂಧನನಿಗೆ ಮಂಗಳಾರತಿ, ಪ್ರಸಾದ ವಿತರಣೆ, ಲಘು ಉಪಹಾರ ನಡೆಯಲಿದೆ ಎಂದು ವೇದವ್ಯಾಸ್ ರಾಮಕುಂಜ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here