ದ್ವಿತೀಯ ಪಿಯುಸಿ ಫಲಿತಾಂಶ: ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಕೆಯ್ಯೂರು -95% (ವಾಣಿಜ್ಯ 100%, ವಿಜ್ಞಾನ 94%.ಕಲಾ ವಿಭಾಗ 90%)

0

ಕೆ.ಪಿ.ಎಸ್‌ ಕೆಯ್ಯೂರು ಇದರ ಪದವಿ ಪೂರ್ವ ವಿಭಾಗದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 95% ಫಲಿತಾಂಶ ಬಂದಿದೆ. 74 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು 70 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ 25 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸತತ 7ನೇ ಬಾರಿ ಶೇಕಡಾ  100 ಫಲಿತಾಂಶ ಬಂದಿರುತ್ತದೆ.8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.ಕು.ಕೀರ್ತಿಕಾ ಅತೀ ಹೆಚ್ಚು ಅಂದರೆ 575 ಅಂಕಗಳನ್ನು ಪಡೆದಿರುತ್ತಾರೆ.ಶ್ರಾವ್ಯ 569,ದಿಲೀಪ್‌ ಕುಮಾರ್‌ 550 ಫಾತಿಮತ್‌ ಅಫ್ರೀನಾ 545,ಚಿಂತನ್‌ ಕುಮಾರ್‌ 544,ಅನುಗ್ರಹ 525,ಮಿಥುನ್‌ 524,ಹಾಗೂ ಚಿಂತನ್‌ ಕೆ.ಜಿ.522 ಅಂಕಗಳನ್ನುಪಡೆದಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ 18 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 94 ಫಲಿತಾಂಶ ಬಂದಿರುತ್ತದೆ.3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು,14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿರುತ್ತಾರೆ. ಮುಹಮ್ಮದ್‌ ಸುಹೈಲ್‌ ಐ.ಪಿ ಅತೀಹೆಚ್ಚು 540 ಅಂಕಗಳನ್ನು ಪಡೆದಿರುತ್ತಾರೆ. ಸನತ್‌ 513 ಹಾಗೂ ಸೌಮಿತ್ರ 512 ಅಂಕಗಳನ್ನು ಪಡೆದಿರುತ್ತಾರೆ.

ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 90 ಫಲಿತಾಂಶ ಬಂದಿರುತ್ತದೆ.4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದು,14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ,7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕು.ಧನ್ಯಶ್ರೀ ಅತೀ ಹೆಚ್ಚು 546 ಅಂಕಗಳನ್ನು ಪಡೆದಿರುತ್ತಾರೆ.ಮಲ್ಲಿಕಾ 531,ಸೌಮ್ಯಾ 519 ಹಾಗೂ ಆಯಿಷತ್‌ ರಿಫಾನ 516 ಅಂಕಗಳನ್ನುಪಡೆದಿರುತ್ತಾರೆ.

LEAVE A REPLY

Please enter your comment!
Please enter your name here