ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇಕಡಾ 93 ಫಲಿತಾಂಶ

0

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇಕಡಾ 93 ಫಲಿತಾಂಶ ಲಭಿಸಿದೆ. 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ ಎನ್ ಪಿ ಮತ್ತು ಅಭಿವೃದ್ಧಿ ಸಮಿತಿಯ ಕಾರ್‍ಯಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯರವರು ತಿಳಿಸಿದ್ದಾರೆ.


ವಿವರಗಳು- ಕಲಾ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಹಾಜರಾಗಿದ್ದು, 15 ವಿದ್ಯಾರ್ಥಿಗಳು ತೆರ್ಗೆಡೆ ಹೊಂದಿದ್ದಾರೆ 2 ಮಂದಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಹರ್ಷಿತಾ ವಿ ಪಿ (556) ( ಕುದ್ಮಾರು ವಿಶ್ವನಾಥ ಮಡಿವಾಳ ಮತ್ತು ಪ್ರೇಮಲತಾರವರ ಪುತ್ರಿ) ಪ್ರತೀಕಾ (510) (ವೀರಮಂಗಲ ಧರ್ಮಪ್ಪ ಮತ್ತು ಸುನಂದಾ ದಂಪತಿ ಪುತ್ರಿ)


ವಾಣಿಜ್ಯ ವಿಭಾಗದಲ್ಲಿ 33 ವಿದ್ಯಾರ್ಥಿಗಳು ಹಾಜರಾಗಿದ್ದು :
32 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ 7 ಮಂದಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಕಿರಣ್ (570) (ಕುದ್ಮಾರು ಪಟ್ಟೆ ನಾರಾಯಣ ಗೌಡ ಮತ್ತು ನಳಿನಿ ದಂಪತಿ ಪುತ್ರ)
ಅನುಜ್ಞಾ ಎಂ ( 549) (ಕ್ಯಾಮಣ ಮರಕ್ಕಡ ಚಂದ್ರಶೇಖರ್ ಮತ್ತು ರೇಷ್ಮಾ ದಂಪತಿ ಪುತ್ರಿ), ಧನ್ಯಶ್ರೀ ಎ ( 537) ಅಮೈ ರಾಮಣ್ಣಗೌಡ ಎ ಮತ್ತು ನಳಿನಿ ದಂಪತಿ ಪುತ್ರಿ) ಅಭಿಷೇಕ್ ಎ ( 531) ಪಾಲ್ತಾಡಿ ಅಂಗಡಿ ಮೂಲೆ ಲೋಕಯ್ಯ ಗೌಡ ಮತ್ತು ಕುಸುಮ ದಂಪತಿ ಪುತ್ರ) ಮಹೇಶ್ ಕುಮಾರ್ ( 526) (ಪಾಲ್ತಾಡಿ ಬರಮೇಲು ಸಂಕಪ್ಪ ಶೆಟ್ಟಿ ಮತ್ತು ಅನಸೂಯ ದಂಪತಿ ಪುತ್ರ) ನಿಶಿತ್ ಐ (523) ಇಡ್ಯಡ್ಕ ಕೊರಗಪ್ಪ ಗೌಡ ಮತ್ತು ಗೀತಾ ದಂಪತಿ ಪುತ್ರ), ಫಾತಿಮತ್ ಸುರೆಯ್ಯ ( 519) (ಸೊರಕೆ ಉಮ್ಮರ್ – ಖತೀಜಮ್ಮ ದಂಪತಿ ಪುತ್ರಿ)


ವಿಜ್ಞಾನ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಹಾಜರಾಗಿದ್ದು, 19 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 3 ಮಂದಿ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಸುಕನ್ಯಾ ( 535) (ಕುದ್ಮಾರು ಅನ್ಯಾಡಿ ಆನಂದ ಮತ್ತು ಕುಮುದ ದಂಪತಿ ಪುತ್ರಿ) ಧಾಮಿನಿ ಬಿ ( 527) (ಬಂಬಿಲ ಪುಟ್ಟಣ್ಣಗೌಡ ಮತ್ತು ಯಶೋದಾ ದಂಪತಿ ಪುತ್ರಿ) ಹಾಗೂ ಯಜ್ಞೇಶ್ ಐ ( 516) (ಇಡ್ಯಡ್ಕ ಪುರುಷೋತ್ತಮ ಮತ್ತು ವೇದಾವತಿ ದಂಪತಿ ಪುತ್ರ)

LEAVE A REPLY

Please enter your comment!
Please enter your name here