ನುಳಿಯಾಲು ತರವಾಡು ಶ್ರೀ ಧರ್ಮಚಾವಡಿ: ವಿಜ್ರಂಭಣೆಯ ಕಾಲಾವಧಿ ನೇಮೋತ್ಸವ

0

ಸುಂದರವಾದ ಪರಿಸರದಲ್ಲಿ ನುಳಿಯಾಲು ತರವಾಡು ಮನೆ
ನುಳಿಯಾಲು ತರವಾಡು ಶ್ರೀ ಧರ್ಮಚಾವಡಿ, ತರವಾಡು ಮನೆಯು ಸುಂದರವಾದ ಪ್ರಶಾಂತ ಪರಿಸರದಲ್ಲಿ ಆಕರ್ಷಕವಾಗಿ ಶೋಭಿಸುತ್ತಿದ್ದು, 2018ರಲ್ಲಿ ತರವಾಡು ಮನೆ ನಿರ್ಮಾಣಗೊಂಡು, ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ನಡೆಯಿತು. ಇದೀಗ 2 ದಿನಗಳ ಕಾಲಾವಧಿ ನೇಮೋತ್ಸವವನ್ನು ಅತ್ಯಂತ ವೈಭವಯುತವಾಗಿ ನೇರವೇರಿಸುವ ಮೂಲಕ ನುಳಿಯಾಲು ತರವಾಡು ಟ್ರಸ್ಟ್ ಮತ್ತು ಕುಟುಂಬದವರು ಇಡೀ ಸಮಾಜದಲ್ಲಿ ಹೆಸರನ್ನು ಪಡೆದಿದ್ದಾರೆ.

ಅತಿಥಿಗಳಿಗೆ ಗೌರವ
ಕಾರ‍್ಯಕ್ರಮಕ್ಕೆ ಆಗಮಿಸಿದ ಊರ-ಪರವೂರ ಅತಿಥಿಗಳನ್ನು ಅದರ ಅತಿಥ್ಯದಿಂದ ನುಳಿಯಾಲು ತರವಾಡು ಮನೆಯವರು ಪ್ರಶಂಸೆಗೆ ಸ್ವಾಗತಿಸಿದರು.

ಪುತ್ತೂರು: ನಿಡ್ಪಳ್ಳಿ ಗ್ರಾಮದ ನುಳಿಯಾಲು ತರವಾಡು ಶ್ರೀ ಧರ್ಮಚಾವಡಿ ಇದರ ಆಶ್ರಯದಲ್ಲಿ ವಿಜ್ರಂಭಣೆಯ ಕಾಲಾವಽ ನೇಮೋತ್ಸವ ಏ. 22, 23ರಂದು ನುಳಿಯಾಲು ತರವಾಡು ಮನೆಯಲ್ಲಿ ಜರಗಿತು.

ಏ. 22 ರಂದು ಪೂರ್ವಾಹ್ನ ಗಣಹೋಮ, ನಾಗತಂಬಿಲ, ಕುಣಿತ ಭಜನೆ, ಶ್ರೀ ವೆಂಕಟರಮಣ ದೇವರಿಗೆ ಹರಿ ಸೇವೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ಇಳಿಯುವುದು ಮತ್ತು ಎಣ್ಣೆಬೂಳ್ಯ ನೀಡಲಾಯಿತು. ಬಳಿಕ ರಾಜನ್ ದೈವ ಪಿಲಿಭೂತಕ್ಕೆ ನೇಮ, ಜುಮಾದಿ ದೈವದ ನೇಮ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 10 ರಿಂದ ವರ್ಣಾರ ಪಂಜುರ್ಲಿ, ಪಂಜುರ್ಲಿ, ಕಲ್ಲುರ್ಟಿ ಮೂಕಾಂಬಿಕಾ ಗುಳಿಗ ನೇಮಗಳು ನಡೆಯಿತು.

ಏ. 23 ರಂದು ಉಷಾ ಕಾಲ ಗಂಟೆ 5ಕ್ಕೆ ರಕ್ತೇಶ್ವರಿ ದೈವದ ನೇಮ, ಪೂರ್ವಹ್ನ ಧರ್ಮದೈವ ಬೀರ್ಣಾಳ್ವ ದೈವದ ನೇಮ, ಗಂಧ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಗುಳಿಗ ದೈವದ ಕೋಲ, ಅನ್ನಸಂತರ್ಪಣೆ ಜರಗಿತು.

ಸಮಾರಂಭದಲ್ಲಿ ಜನಪ್ರತಿನಿಧಿಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಖಂಡರುಗಳು, ವಿವಿಧ ಸಂಘ-ಸAಸ್ಥೆಗಳ ಪದಾಽಕಾರಿಗಳು, ಊರ-ಪರವೂರ ಹಿತೈಷಿಗಳು ಭಾಗವಹಿಸಿದ್ದರು.

ನುಳಿಯಾಲು ತರವಾಡು ಟ್ರಸ್ಟ್ನ ಅಧ್ಯಕ್ಷ ಹಾಗೂ ಯಜಮಾನ ನುಳಿಯಾಲು ಜಗನ್ನಾಥ ರೈ, ಕರ‍್ಯದರ್ಶಿ ನುಳಿಯಾಲು ಪುರುಷೋತ್ತಮ ಆರ್ ಶೆಟ್ಟಿ, ಕೋಶಾಽಕಾರಿ ನುಳಿಯಾಲು ಪುರಂದರ ರೈ ಮಿತ್ರಂಪಾಡಿ, ಟ್ರಸ್ಟಿಗಳಾದ ನುಳಿಯಾಲು ರಘುನಾಥ ರೈ, ನುಳಿಯಾಲು ರವೀಂದ್ರ ಶೆಟ್ಟಿ, ನುಳಿಯಾಲು ಜಯರಾಮ ರೈ, ಗಂಗಾಧರ ರೈ ಸೋಣಂಗೇರಿ, ಚಿತ್ತರಂಜನ್ ಶೆಟ್ಟಿ ನುಳಿಯಾಲು, ದಿವಾಕರ ರೈ ಜಾಲ್ಯೂರು, ಅಮೃತಕುಮಾರ್ ರೈ ಕುಂಜಾಡಿ, ರಾಧಾಕೃಷ್ಣ ರೈ ನುಳಿಯಾಲು, ಜಗನ್ನಾಥ ಶೆಟ್ಟಿ ಪುದ್ದೊಟ್ಟು, ಸುಭಾಷ್ ರೈ ನಾಕಪ್ಪಾಡಿ, ಕುಸುಮಾ ಶೆಟ್ಟಿ ಹೊಸಮನೆ ನುಳಿಯಾಲು, ವಾರಿಜಾ ಶೆಟ್ಟಿ ಹೊಸಮನೆ ನುಳಿಯಾಲು, ಪ್ರದೀಪ್ ರೈ ನುಳಿಯಾಲು, ಖಾಯಂ ಆಹ್ವಾನಿತರಾದ ಶ್ರೀನಿವಾಸ ರೈ ನುಳಿಯಾಲು, ದಿನೇಶ್ ರೈ ನುಳಿಯಾಲು ಹಾಗೂ ಸಮಸ್ತ ಕುಟುಂಬಸ್ಥರು ಮತ್ತು ಬಂಧುಗಳು ಕರ‍್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.

LEAVE A REPLY

Please enter your comment!
Please enter your name here