ಕಾಣಿಯೂರು: ಲಂಚ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಸುದ್ದಿ ಜನಾಂದೋಲನ ವೇದಿಕೆಯ ಅಭಿಯಾನಕ್ಕೆ ಬೆಂಬಲವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು. ಭಾಗೀರಥಿ ಮುರುಳ್ಯರವರು ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕರಿಸಿದರು. ಎ. 23ರಂದು ಬೆಳಂದೂರಿನ ಆನಂದ ಕೂಂಕ್ಯರವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗೂ ಉಪಸ್ಥಿತರಿದ್ದ ಬಿಜೆಪಿಯ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ‘ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ, ಲಂಚ ಎಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ’ ಎಂಬ ಘೋಷಣೆಯನ್ನು ಕೂಗಿ ಲಂಚ-ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕರಿಸಿದರು. ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಸುತ್ತಿರುವ ಈ ಜನಜಾಗೃತಿ ಅಭಿಯಾನ ಬಹಳ ಒಳ್ಳೆಯ ಕೆಲಸ. ನಮ್ಮ ಪಕ್ಷ ಈ ಆಂದೋಲನಕ್ಕೆ ಬೆಂಬಲ ನೀಡುತ್ತದೆ. ನಾನು ಜನಪ್ರತಿನಿಧಿಯಾಗಿ ಲಂಚ ಭ್ರಷ್ಟಾಚಾರದ ವಿರುದ್ಧವಿರುತ್ತೇನೆ” ಎಂದು ಭಾಗೀರಥಿ ಮುರುಳ್ಯ ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಭಾರಿ ಕುಶಾಲಪ್ಪ ಗೌಡ ಪೂವಾಜೆ, ಅಭ್ಯರ್ಥಿ ಪ್ರಮುಖ್ ವಿನಯ ಮುಳುಗಾಡು, ಮಂಡಲ ಕಾರ್ಯದರ್ಶಿ ಇಂದಿರಾ ಬಿ. ಕೆ, ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಆಳ್ವ, ಪರಿವಾರ ಸಂಘಟನೆಯ ಪ್ರಮುಖ್ ಸುಪ್ರೀತ್ ರೈ ಖಂಡಿಗ, ಮಹಿಳಾ ಮೋರ್ಚಾದ ಅಧ್ಯಕ್ಷೆ ಶುಭದಾ ಎಸ್ ರೈ, ಜಿ. ಪಂ. ಮಾಜಿ ಸದಸ್ಯರಾದ ಪ್ರಮೀಳಾ ಜನಾರ್ದನ, ಪುಷ್ಪಾವತಿ ಕಳುವಾಜೆ, ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕುಸುಮ ಶೆಟ್ಟಿ, ಮಂಡಲ ಸಮಿತಿ ಸದಸ್ಯೆ ಉಮೇಶ್ವರಿ ಅಗಳಿ, ಬೂತ್ ಸಮಿತಿ ಅಧ್ಯಕ್ಷ ನಿರ್ಮಲಾ ಕೇಶವ ಗೌಡ,ಗ್ರಾ.ಪಂ. ಸದಸ್ಯ ಜಯಂತ ಅಬೀರ, ಆನಂದ ಕೂಂಕ್ಯ, ಗೋಪಾಲ ಪೂಜಾರಿ, ಜಯಪ್ರಕಾಶ್ ಶೆಟ್ಟಿ, ನಾರ್ಣಪ್ಪ ಗೌಡ ಕೂಂಕ್ಯ, ಪ್ರವೀಣ್ ಅಮೈ, ಮಾಧವ ಕೂಂಕ್ಯ, ತಿಮ್ಮಪ್ಪ, ಸಿರತ್ ಕೂಂಕ್ಯ ಮೊದಲಾದವರಿದ್ದರು. ಸುಳ್ಯ ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಪ್ರತಿಜ್ಞಾವಿಽ ಬೋಽಸಿದರು. ವರದಿಗಾರರಾದ ಈಶ್ವರ ವಾರಣಾಸಿ, ಸುಧಾಕರ್ ಕಾಣಿಯೂರು ಮತ್ತು ದಯಾನಂದ ಕೊರತ್ತೋಡಿ ಜತೆಗಿದ್ದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನಾನು ನನ್ನ ಕ್ಷೇತ್ರದ ಜನರಿಂದ ಲಂಚ ಪಡೆಯುವ ಯಾವುದೇ ಅಧಿಕಾರಿಗೆ ರಕ್ಷಣೆ ನೀಡುವುದಿಲ್ಲ. ಮಾತ್ರವಲ್ಲ ಅಧಿಕಾರಿ ಲಂಚ ಪಡೆದ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಆ ಅಧಿಕಾರಿಯಿಂದ ಲಂಚದ ಹಣವನ್ನು ವಾಪಸ್ ಕೊಡಿಸುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ.
ಭಾಗೀರಥಿ ಮುರುಳ್ಯ, ಬಿಜೆಪಿ ಅಭ್ಯರ್ಥಿ ಸುಳ್ಯ ವಿಧಾನಸಭಾ ಕ್ಷೇತ್ರ