ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಎಸ್ ಡಿ ಪಿ ಐ ಸದಸ್ಯ ಕಾಂಗ್ರೆಸ್ ಗೆ ಸೇರ್ಪಡೆ

0

ಪುತ್ತೂರು : ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಡ್ಕಿದು ಗ್ರಾಮದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪಕ್ಷದ ಚುನಾವಣಾ ಪ್ರಚಾರ ಸಭೆ ನಡೆಯಿತು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ನೇತೃತ್ವದಲ್ಲಿ ಎಸ್ ಡಿಪಿಐ ಪಕ್ಷದ ಸದಸ್ಯ ಅಬೂಬಕ್ಕರ್ ಕೋಲ್ಪೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ಮಿತ್ತೂರು ಕಾಸಿಂ ಹಾಜಿ, ಇಸಾಕ್ ಸಾಲ್ಮರ, ಪ್ರವೀಣ್ ಚಂದ್ರ ಆಳ್ವ, ನೂರುದ್ದೀನ್ ಸಾಲ್ಮರ, ಸೇರಿದಂತೆ ಪಕ್ಷದ ಹಲವರು ಮುಖಂಡರು, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here