ಶಾಂತಿಗೋಡು ಕರ್ಪುತ್ತಮೂಲೆಯಲ್ಲಿ ಬಿಜೆಪಿಯಿಂದ ಚುನಾವಣಾ ಪ್ರಚಾರ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರವರ ಪರವಾಗಿ ಶಾಂತಿಗೋಡು ಗ್ರಾಮದ ಪಾರ್ವತಿ ಕರ್ಪುತ್ತಮೂಲೆರವರ ಮನೆಯಲ್ಲಿ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು.


ಶಾಸಕ ಸಂಜೀವ ಮಠಂದೂರು ಮಾತನಾಡಿ ಮುಂಬರುವ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಶ್ರಮ ಅಗತ್ಯವಾಗಿದೆ. ಹಿಂದಿನ ಅವಧಿಯಲ್ಲಿ ಸುಮಾರು 20ಕೋಟಿಗೂ ಮಿಕ್ಕಿ ಅನುದಾನ ಶಾಂತಿಗೋಡು ಗ್ರಾಮಕ್ಕೆ ಬಂದಿದೆ. ಕೃಷಿಕರಿಗೆ ಅನುಕೂಲವಾಗುವ ಕಿಂಡಿ ಅಣೆಕಟ್ಟು, ಏತ ನೀರಾವರಿ ಯೋಜನೆ ಹಾಗೂ ರಸ್ತೆಗಳಿಗೆ ಹಲವಾರು ಅನುದಾನಗಳನ್ನು ನೀಡಲಾಗಿದೆ. ಮುಂಬರುವ ಚುನಾವಣೆಗೆ ಈ ಅಭಿವೃದ್ಧಿ ಪೂರಕವಾಗಲಿದೆ. ಮತದಾರರು ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಬಿಜೆಪಿಯನ್ನು ಮತ್ತೊಮ್ಮೆ ಜಯಭೇರಿ ಬಾರಿಸುವಂತೆ ಮಾಡಬೇಕು ಎಂದು ವಿನಂತಿಸಿದರು. ಅಭ್ಯರ್ಥಿ ಆಶಾ ತಿಮ್ಮಪ್ಪ ಮಾತನಾಡಿ ಚುನಾವಣೆಯಲ್ಲಿ ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಯನ್ನು ಹಿಂದಿನ ಅಭಿವೃದ್ಧಿ ಕಾರ್ಯವನ್ನು ನೋಡಿ ಗೆಲ್ಲಿಸುವಲ್ಲಿ ಪ್ರಯತ್ನಿಸಬೇಕು ಎಂದರು.


ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮಪ್ಪ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಹಿರಿಯ ಮುಖಂಡ ಅಪ್ಪಯ್ಯ ಮಣಿಯಾಣಿ, ಜಿಲ್ಲಾ ಕಾರ್ಯದರ್ಶಿ ಸುಧೀರ್ ಕುಮಾರ್, ನಿತೀಶ್ ಕುಮಾರ್ ಶಾಂತಿವನ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಶಕ್ತಿ ಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್, ಬೂತ್ ಅಧ್ಯಕ್ಷ ಕೃಷ್ಣ ಸಾಲಿಯಾನ್, ರವಿ ಕೈಲಾಜೆ, ದಿನೇಶ್ ಮಜಲು, ದಿನೇಶ್ ಪಂಜಿಗ, ಮಹಿಳಾ ಮೋರ್ಚಾದ ರೂಪಾ ಸತೀಶ್ ಪರಕಮೆ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್ ಕರ್ಪುತ್ತಮೂಲೆ, ಲೋಕೋಪಯೋಗಿ ಕಂಟ್ರಾಕ್ಟರ್ ಯೋಗೀಶ್ ಕೈಂದಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here