ಪುತ್ತೂರು: ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಎ.26ರಂದು ಪ್ರಣಾಳಿಕೆ ಬಿಡುಗಡೆ ಮಾಡವುದಾಗಿ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುತ್ತಿಲ, ಚುನಾವಣಾ ಆಯೋಗ ಈಗಾಗಲೇ ನಮಗೆ ಬ್ಯಾಟ್ ಚಿಹ್ನೆ ನೀಡಿದೆ. ತಪ್ಪಿ ಹೋದ ಸಿದ್ದಾಂತಗಳನ್ನು ಸರಿ ದಾರಿಗೆ ತರುವ ವ್ಯವಸ್ಥೆಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಿಜೆಪಿಯ ಹಿರಿಯ ಸದಸ್ಯರು ಸಂಘಟನೆಯ ವಿವಿಧ ಕ್ಷೇತ್ರಗಳ ಪದಾಧಿಕಾರಿಗಳು, ಈ ಕ್ಷೇತ್ರದ ಸಾಮಾನ್ಯ ಕಾರ್ಯಕರ್ತರ ಭಾವನೆಗಳಿಗೆ ಮುಂದಿನ ದಿನಗಳಲ್ಲಿ ಬೆಲೆ ಸಿಗಬೇಕು ಮತ್ತು ಸನಾತನ ಧರ್ಮ ಪರಂಪರೆಯ ಜೊತೆಗೆ ಈ ಕ್ಷೇತ್ರದ ಜನಪ್ರತಿನಿಧಿ ಒಬ್ಬ ಸಾಮಾನ್ಯ ಕಾರ್ಯಕರ್ತ ಈ ಭಾರಿಯ ಚುನಾವಣೆಯಲ್ಲಿ ಹಿಂದುತ್ವದ ಆಧಾರದಲ್ಲಿ ಜಯಗಳಿಸ ಬೇಕೆನ್ನುವ ಎಲ್ಲರ ಅಭಿಪ್ರಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಪುತ್ತಿಲ ಹೇಳಿದ್ದಾರೆ.
ಅವರು ದರ್ಬೆ ಮುಕ್ರಂಪಾಡಿಯಲ್ಲಿರುವ ಚುನಾವಣಾ ನಿರ್ವಹಣಾ ಸಮಿತಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುನಿಲ್ ಬೋರ್ಕರ್, ನವೀನ್ ರೈ ಪಂಜಳ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.