ಕೋಡಿಂಬಾಳ: ಬೈಕ್ ಅಪಘಾತ ವ್ಯಕ್ತಿ ಸಾವು

0

ಕಡಬ: ಬೈಕ್ ಅಪಘಾತವಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಏ.25ರಂದು ರಾತ್ರಿ ನಡೆದಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆ ಜಿಲ್ಲೆಯ ಹೊಸಬೆಳನೂರು ಗ್ರಾಮದ ಮಂಜು(25ವ.) ಎಂಬವರು ಮೃತಪಟ್ಟವರು.

ಅಟೋ ಚಾಲಕ ಕೋಡಿಂಬಾಳ ಗ್ರಾಮದ ಕಲ್ಲಂತ್ತಡ್ಕ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಅವರು ಈ ಬಗ್ಗೆ ದೂರು ನೀಡಿದ್ದಾರೆ. ‘ನಾನು ಕಡಬದಿಂದ ಕೋಡಿಂಬಾಳ ಕಡೆಗೆ ಹೋಗುತ್ತಿದ್ದ ವೇಳೆ ಕಲ್ಲಂತ್ತಡ್ಕ ಎಂಬಲ್ಲಿ ಪಲ್ಸರ್ ಬೈಕ್‌ ಜತೆ ಅಪರಿಚಿತ ಯುವಕನೋರ್ವ ಬಿದ್ದಿದ್ದರು. ಈ ವೇಳೆ ನಾನು ಹಾಗೂ ಸ್ಥಳದಲ್ಲಿದ್ದ ಹಮೀದ್ ಹಾಗೂ ವಾಸು ಅವರು ಬೈಕ್ ಅಪಘಾತದಿಂದ ಗಾಯೊಗೊಂಡಿದ್ದ ಯುವಕನನ್ನು ತನ್ನ ಅಟೋ ರಿಕ್ಷಾದಲ್ಲಿ ಕಡಬ ಸಮುದಾಯ ಆಸ್ಪತ್ರೆಗೆ ತಂದಿದ್ದೇವೆ. ಈ ವೇಳೆ ಗಾಯಾಳು ಮಂಜು ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಣ್ಣು ರಸ್ತೆಯ ಎತ್ತರದ ದಿಬ್ಬದ ಮೇಲೆ ಮೋಟಾರ್ ಸೈಕಲ್ ಚಲಾಯಿಸಿದ ಪರಿಣಾಮ ಸವಾರ ಮಂಜುರವರು ಮೋಟಾರ್ ಸೈಕಲ್‌ನಿಂದ ಹಾರಿ ಡಾಮಾರು ರಸ್ತೆಗೆ ಬಿದ್ದು ತಲೆಗೆ ರಕ್ತಗಾಯವಾಗಿ ಮೃತಪಟ್ಟಿರಬಹುದು’ ಎಂದು ಅವರು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here