ಪುತ್ತೂರು:ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ 2002ರಲ್ಲಿ ಪ್ರಾರಂಂಭಗೊಂಡಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘವು ಮುಖ್ಯ ಕಚೇರಿ ಸಹಿತ ಒಟ್ಟು 8 ಶಾಖೆಗಳನ್ನು ಹೊಂದಿದ್ದು, 2022-23ನೇ ಸಾಲಿನಲ್ಲಿ ರೂ.400 ಕೋಟಿಗೂ ಅಧಿಕ ವ್ಯವಹಾರ ನಡೆಸಿ ರೂ. 1 ಕೋಟಿಗೂ ಮಿಕ್ಕಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ತಿಳಿಸಿದ್ದಾರೆ.
ಪುತ್ತೂರು ಎಪಿಎಂಸಿ ಮಾನಾಯಿ ಆರ್ಚ್ ಕಟ್ಟಡ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದ ಕಟ್ಟಡ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು ಮತ್ತು ಕಾಣಿಯೂರುಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಸುಮಾರು 7 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ. ಕಳೆದ ಅವಧಿಯಲ್ಲಿ ರೂ.400 ಕೋಟಿಗಿಂತಲೂ ಮಿಕ್ಕಿ ವ್ಯವಹಾರಗಳನ್ನು ಮಾಡಿದೆ. ಸಂಘವು ರೂ.3.5 ಕೋಟಿಗಿಂತ ಮಿಕ್ಕಿ ಪಾಲು ಬಂಡವಾಳವನ್ನು ಹೊಂದಿದೆ. ಸದ್ರಿ ಅವಧಿಯಲ್ಲಿ ರೂ.76 ಕೋಟಿಗಿಂತ ಮಿಕ್ಕಿ ಠೇವಣಿ ಹೊಂದಿದ್ದು, ರೂ. 72 ಕೋಟಿಗಿಂತ ಮಿಕ್ಕಿ ಹೊರಬಾಕಿ ಸಾಲವಿದೆ. ಪ್ರಪ್ರಥಮ ಬಾರಿಗೆ ಶೇ.99.61 ಸಾಲ ವಸೂಲಾತಿ ಆಗಿದ್ದು, ಸುಮಾರು ರೂ.1 ಕೋಟಿಗಿಂತಲೂ ಮಿಕ್ಕಿ ಲಾಭ ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮತ್ತು ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಧಾಕರ್ ಅವರು ತಿಳಿಸಿದ್ದಾರೆ.