ನೆಲ್ಯಾಡಿಯ ಉಪನ್ಯಾಸಕ, ಕಲಾವಿದ ವಿಶ್ವನಾಥ ಶೆಟ್ಟಿಯವರಿಗೆ ‘ಆರ್ಯಭಟ ಇಂಟರ್ ನ್ಯಾಷನಲ್ ಪ್ರಶಸ್ತಿ’

0

ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ, ಬಹುಮುಖ ಪ್ರತಿಭೆಯ ಕಲಾವಿದ ವಿಶ್ವನಾಥ ಶೆಟ್ಟಿ ಕೆ.,ಅವರು ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಆರ್ಯಭಟ ಕಲ್ಚರಲ್ ಆರ್ಗನೈಜೇಶನ್‌ನ ಸ್ಥಾಪಕಾಧ್ಯಕ್ಷ ಡಾ. ಎಚ್.ಎಲ್.ಎನ್. ರಾವ್ ಅವರು ತಿಳಿಸಿದ್ದಾರೆ.


ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಕುಂಡಡ್ಕ ದಿ.ಪಕೀರಪ್ಪ ಶೆಟ್ಟಿ ಕೆ ಮತ್ತು ದಿ. ಪೂವಕ್ಕ ಶೆಟ್ಟಿ ಪುತ್ರರಾದ ವಿಶ್ವನಾಥ್ ಶೆಟ್ಟಿ ಅವರು ನೆಲ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ನೆಲ್ಯಾಡಿಯ ಸಂತ ಜಾರ್ಜ್ ಪದವಿಪೂರ್ವ ಕಾಲೇಜುನಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ, ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯಲ್ಲಿ ಪದವಿ ವಿದ್ಯಾಭ್ಯಾಸ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಹಿಸ್ಟರಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ಮಾಸ್ಟರ್ ಆಫ್ ಆರ್ಟ್ಸ್ ಇನ್ ಕನ್ನಡ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ, ಬಿ.ಎಡ್ ಪದವಿಯನ್ನು ಇಂದಿರಾಗಾಂಧಿ ವಿಶ್ವವಿದ್ಯಾನಿಲಯ ದೆಹಲಿಯಲ್ಲಿ ಪೂರೈಸಿದ್ದಾರೆ. ಇವರು ಶಾಸ್ತ್ರೀಯ ಸಂಗೀತ ಮತ್ತು ಹಾರ್ಮೋನಿಯಂ ಶಿಕ್ಷಣವನ್ನು ಗುರುಗಳಾದ ಉಡುಪಿ ವಾಸುದೇವ ಭಟ್ ಇವರಲ್ಲಿ ಕಲಿತಿದ್ದಾರೆ. ಉಡುಪಿ, ಕುಂದಾಪುರ, ಹಿರಿಯಡ್ಕ ಮುಂತಾದ ಕಡೆಗಳಲ್ಲಿ ಅಧ್ಯಾಪಕರಾಗಿ ವೃತ್ತಿ ಬದುಕು ಆರಂಭಿಸಿದ ಇವರು ಪ್ರಸ್ತುತ ನೆಲ್ಯಾಡಿ ಸಂತಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಲಾ ಕ್ಷೇತ್ರದಲ್ಲಿ ಸೇವೆ:
ಉತ್ತಮ ಗಾಯಕರಾಗಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕುವೈಟ್ ಮತ್ತು ದುಬೈ ಮುಂತಾದ ಕಡೆಗಳಲ್ಲಿ ತುಳು ನಾಟಕಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿರುತ್ತಾರೆ. ಅತ್ಯುತ್ತಮ ಕೀಬೋರ್ಡ್ ವಾದಕರು, ಉತ್ತಮ ಹಾಡುಗಾರರು, ನಾಟಕ ರಚನೆ ಮತ್ತು ನಿರ್ದೇಶಕರು, ಯಕ್ಷಗಾನ ಕಲಾವಿದರು. ಸಂಗೀತಾಸಕ್ತ ಮಕ್ಕಳಿಗೆ ಕೀಬೋರ್ಡ್ ಮತ್ತು ಸುಗಮ ಸಂಗೀತವನ್ನು ಕಲಿಯುವುದಕ್ಕಾಗಿ ಲಹರಿ ಸಂಗೀತ ಕಲಾಕೇಂದ್ರ ಎಂಬ ಸಂಸ್ಥೆಯನ್ನು ನೆಲ್ಯಾಡಿಯಲ್ಲಿ ನಡೆಸುತ್ತಿದ್ದಾರೆ. ಕೇಪುದ ಬೆಡಿ, ಮಾತೃದೇವೋಭವ, ಭೂತ ಉಂಡುಗೆ, ತೂದು ಕಲ್ಪೊಡು ಇವರು ರಚಿಸಿದ ತುಳು ನಾಟಕ ಕೃತಿಗಳಾಗಿವೆ. ಅಲ್ಲದೇ ಅನೇಕ ತುಳು ನಾಟಕಗಳಿಗೆ ಹಾಡುಗಳ ರಚನೆ ಹಾಗೂ ಕಥೆ, ಕವನ, ಹಾಸ್ಯ ಲೇಖನಗಳನ್ನು ಬರೆದಿದ್ದಾರೆ. ಮಂಗಳೂರು ಆಕಾಶವಾಣಿ ಯುವವಾಣಿ ವಿಭಾಗದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ ಸಂಘ ದೆಹಲಿ ಮತ್ತು ಮುಂಬೈಯಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.


ಸಾಮಾಜಿಕ ಕ್ಷೇತ್ರ:
ಅಶಕ್ತ ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕದ ನೆರವು, ಕೋವಿಡ್‌ನ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ ಚಾಲಕರಿಗೆ ಹಲವಾರು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಉಚಿತ ಆಹಾರ ಮತ್ತು ನೀರಿನ ವ್ಯವಸ್ಥೆ, ಪೊಲೀಸ್, ಮೆಸ್ಕಾಂ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಅಗತ್ಯ ವಸ್ತುಗಳ ಸರಬರಾಜು ಮಾಡಿದ್ದಾರೆ. ಜೆಸಿಐ ನೆಲ್ಯಾಡಿ ಇದರ ಅಧ್ಯಕ್ಷನಾಗಿ, ಲಯನ್ಸ್ ಕ್ಲಬ್ ಆಲಂಕಾರು ಇದರ ಸದಸ್ಯನಾಗಿ, ಸೀನಿಯರ್ ಛೇಂಬರ್ ನೆಲ್ಯಾಡಿ ಇದರ ಸದಸ್ಯನಾಗಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಯಾಗಿ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಿದ್ದಾರೆ. ಯುವ ಜನತೆಗೆ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಶಿರ್ಷಿಕೆಯಡಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸರಕಾರಿ ಪ್ರೌಢಶಾಲೆ ಕೊಕ್ಕಡ ಇಲ್ಲಿ ನಡೆಸಿದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ. ಎ ಜೆ ಆಸ್ಪತ್ರೆ ಮಂಗಳೂರು ಇವರ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದರು.

ಪ್ರಶಸ್ತಿಗಳು:
ನಿರತ ಸಾಹಿತ್ಯ ಸಂಪದ ತುಂಬೆ ಹಾಸ್ಯ ಲೇಖನಕ್ಕಾಗಿ ಅಭಿನಂದನ ಪತ್ರ
ಬಂಟ ಪ್ರತಿಭಾನ್ವೇಷಣೆ ಭಕ್ತಿ ಗೀತೆ ಪ್ರಥಮ ಪ್ರಶಸ್ತಿ ಪತ್ರ

  • kids children techno group Awarded certificate for state level English talent Quest exam ೨೦೦೫-೦೬.
  • ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರಿಂದ ಕಲಾ ಪ್ರತಿಭೋತ್ಸವ ೨೦೦೮ ನಾಟಕ ನಿರ್ದೇಶನ ಪ್ರಶಸ್ತಿ
  • ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು ಇವರ ನಾಟಕಕ್ಕೆ ಸಂಗೀತ ನೀಡಿರುವುದಕ್ಕಾಗಿ ಸನ್ಮಾನ ಪತ್ರ
  • Indian senior chamber Udupi temple city legion awarded first place in singing competition
  • ಹಳೆ ಮಾರಿಯಮ್ಮ ದೇವಸ್ಥಾನ ಕಾಪು ಉಡುಪಿ ಜಿಲ್ಲೆ ಭಜನಾ ಸಪ್ತಾಹದಲ್ಲಿ ಭಾಗವಹಿಸಿರುವುದಕ್ಕಾಗಿ ಪ್ರಮಾಣ ಪತ್ರ
  • ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಕರ್ನಾಟಕ ಸರಕಾರ ನಡೆಸಿದ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಪ್ರಶಸ್ತಿ
  • junior chamber International India Belli torana certificate of participation
  • ಜೆಸಿಐ ಇಂಟರ್‌ನ್ಯಾಷನಲ್ ಇದರ ಅತ್ಯುತ್ತಮ ಪ್ರಶಸ್ತಿಗಳಾದ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾ ರತ್ನ 2022 ಪ್ರಶಸ್ತಿ ಪುರಸ್ಕಾರ


LEAVE A REPLY

Please enter your comment!
Please enter your name here