ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ರೋಡ್ ಶೋ-ಮತಯಾಚನೆ

0

ಬಂಟ್ವಾಳ:ಸಿದ್ದಕಟ್ಟೆ ಚರ್ಚ್ ಬಳಿಯಿಂದ ಪೇಟೆಯವರೆಗೆ ಬಂಟ್ವಾಳ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಬುಧವಾರ ಸಂಜೆ ಬೃಹತ್ ರೋಡ್ ಶೋ ನಡೆಸಿ ಮತಯಾಚನೆಗೈದರು.
ಸಹಸ್ರಾರು ಕಾರ್ಯಕರ್ತರೊಂದಿಗೆ ಸಿದ್ದಕಟ್ಟೆಯ ಹೆದ್ದಾರಿಯಲ್ಲಿನ ಪ್ರತಿ ಮಳಿಗೆಗಳು, ರಿಕ್ಷಾಚಾಲಕರು,‌ ಸಾರ್ವಜನಿಕರನ್ನು ಭೇಟಿಯಾಗಿ ಮತಯಾಚಿಸಿದರು. ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ, ರವೀಶ್ ಶೆಟ್ಟಿ, ಕೇರಳ ರಾಜ್ಯದ ಬಿಜೆಪಿ ಖಜಾಂಚಿ ಕೃಷ್ಣದಾಸ್, ಪಾಲಕ್ಕಾಡು ಬಿಜೆಪಿ ಜಿಲ್ಲಾಧ್ಯಕ್ಷ ಹರಿದಾಸ್, ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪ್ರಭಾರಿ ರವಿಶಂಕರ್ ಮಿಜಾರ್, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಜಾತ, ಪಕ್ಷದ ಪ್ರಮುಖರಾದ ದೇವದಾಸ ಶೆಟ್ಟಿ,ಸುಲೋಚನಾ ಜಿ.ಕೆ.ಭಟ್, ಮಾಧವ ಮಾವೆ, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥ ರಾಯಿ, ಉಮೇಶ್ ಗೌಡ, ರಂಜಿತ್ ಮೈರ, ರತ್ನಕುಮಾರ ಚೌಟ, ಹರೀಶ್ ಆಚಾರ್ಯ, ಮಂದಾರತಿ ಶೆಟ್ಟಿ, ಸಂದೇಶ್ ಶೆಟ್ಟಿ, ದೇವರಾಜ್ ಸಾಲಿಯಾನ್, ರಾಜೇಶ್ ಶೆಟ್ಟಿ, ಸುನೀಲ್ ಶೆಟ್ಟಿಗಾರ್, ಸುರೇಶ್ ಕುಲಾಲ್, ವಿಶ್ವನಾಥ ಶೆಟ್ಟಿಗಾರ್, ಮಾಧವ ಶೆಟ್ಟಿಗಾರ್,ಮೋನಪ್ಪ ದೇವಸ್ಯ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಭೋಜ ಶೆಟ್ಟಿಗಾರ್, ಯಶೋಧರ ಕರ್ಬೆಟ್ಟು, ದೇವಪ್ಪ ಗೌಡ, ಅಮ್ಮು ಕೋಟ್ಯಾನ್, ಓಬಯ್ಯ ಗೌಡ, ತೇಜಸ್ ಪೂಜಾರಿ, ನವೀನ್ ಪೂಜಾರಿ, ಸುರೇಶ್ ಅಂಚನ್, ಶೇಖರ ಶೆಟ್ಟಿ ಬದ್ಯಾರ್, ರತ್ನಾಕರ ಮದಂಗೋಡಿ, ಲಿಂಗಪ್ಪ ಪೂಜಾರಿ, ಸಂಜೀವ ಶೆಟ್ಟಿಮದಂಗೋಡಿ ,ರಶ್ಮಿತ್ ಶೆಟ್ಟಿ, ದಿನೇಶ್ ಸುವರ್ಣ ರಾಯಿ, ವೀರೇಂದ್ರ ಸಿದ್ದಕಟ್ಟೆ, ನವೀನ್ ಆಯೋಧ್ಯೆ ಮೊದಲಾದವರಿದ್ದರು.

ರಾಜೇಶ್ ನಾಯ್ಕ್ ಗೆಲ್ಲಿಸಿ: ಬಳಿಕ ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಕೇರಳ ರಾಜ್ಯ ಬಿಜೆಪಿ ಖಜಾಂಚಿ ಕೃಷ್ಣದಾಸ್ ನಡೆದ ಅವರು ಮಾತನಾಡಿ, ದೇಶವಿರೋಧಿ ಚಟುವಟಿಕೆಯಲ್ಲಿರುವವರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿ ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು. ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಶಾಸಕರಾಗಿ ಅತ್ತ್ಯುತ್ತಮವಾಗಿ ಕೆಲಸ ಮಾಡಿದ್ದು, 2000 ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಲ್ಲದೆ ಶಾಂತಿಯ ಬಂಟ್ವಾಳವನ್ನಾಗಿ ಪರಿವರ್ತಿಸಿದ್ದು, ಈ ಚುನಾವಣೆಯಲ್ಲಿಯೂ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಅವರು ಮನವಿ ಮಾಡಿದರು.

ಅಭಿವೃದ್ಧಿ, ಶಾಂತಿಯೇ ಬಿಜೆಪಿಯ ಬದ್ಧತೆ: ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬಂಟ್ವಾಳದಲ್ಲಿದ್ದ ಕೋಮುಗಲಭೆ, ಲವ್ ಜಿಹಾದ್, ಗೋ ಹತ್ಯೆ, ಮತಾಂತರ ಮೊದಲಾದ ಅಕ್ರಮ ದಂಧೆಗಳ ಅಡ್ಡೆಗಳನ್ನು ಮಣ್ಣಿನಡಿಗೆ ಹಾಕಿದ ಕೀರ್ತಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತಿದ್ದು, ಮುಸ್ಲಿಂ ಲೀಗ್ ಶಾಸಕರನ್ನು ಬಂಟ್ವಾಳಕ್ಕೆ ಕರೆಸಿ ನಾಮಪತ್ರ ಹಾಕಿಸಿರುವ ಮರ್ಮ ಏನು ಎಂಬುದನ್ನು ಕಾಂಗ್ರೆಸ್ ಹೇಳಬೇಕು ಎಂದರು. ಅಭಿವೃದ್ಧಿ, ಶಾಂತಿಯೇ ಬಿಜೆಪಿಯ ಬದ್ಧತೆಯಾಗಿದ್ದು, ಭಯಮುಕ್ತ, ನೆಮ್ಮದಿಯ ಬಂಟ್ವಾಳವನ್ನು ಕಟ್ಟಲಾಗಿದೆ. ಆದರೆ ಕಾಂಗ್ರೆಸ್ ಬಂಟ್ವಾಳಕ್ಕೆ ಮುಸ್ಲಿಂ ಲೀಗ್ ಶಾಸಕರನ್ನು ಕರೆಸಿ ಮತ್ತೆ ಇಲ್ಲಿನ ಶಾಂತಿಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಂಟ್ವಾಳವನ್ನು ಭಯೋತ್ಪಾದಕರ ಅಡ್ಡೆ ಮಾಡಲು ಹೊರಟಿದೆ ಎಂದು ಆರೋಪಿಸಿದರಲ್ಲದೆ, ಬಂಟ್ವಾಳವನ್ನು ಭಯೋತ್ಪಾದಕರ ತಾಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದ್ದು, ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರನ್ನು ಗೆಲ್ಲಿಸುವ ಅಗತ್ಯವಿದೆ ಎಂದರು.‌

ಬಿಜೆಪಿ ಕಾರ್ಯಕರ್ತರ ಪಕ್ಷ: ಅಭ್ಯರ್ಥಿ ರಾಜೇಶ್ ನಾಐಕ್ ಉಳಿಪಾಡಿಗುತ್ತು ಅವರು ಮಾತನಾಡಿ, ನಿತ್ಯವೂ ಗಲಭೆಯ ಗೂಡಾಗಿದ್ದ ಬಂಟ್ವಾಳವನ್ನು ಶಾಂತಿಯ ಬಂಟ್ವಾಳವನ್ನಾಗಿ ರೂಪಿಸಬೇಕು ಎಂಬ ಉದ್ದೇಶದಿಂದ ಶಾಸಕನಾಗಿ ಜವಾಬ್ದಾರಿ ಸ್ವೀಕರಿಸಿದ್ದು, ಎಲ್ಲರ ಸಹಕಾರದಿಂದ ಅದು ಕೈಗೂಡಿದೆ.ಜತೆಗೆ ಅಭಿವೃದ್ಧಿಯೂ ಸಾಕಾರಗೊಂಡಿದೆ.ಬಿಜೆಪಿಯು ಸಾಮಾನ್ಯ ಕಾರ್ಯಕರ್ತರಿಗೂ ಟಿಕೆಟ್ ಕೊಡುವ ಕಾರ್ಯವನ್ನು ಮಾಡುತ್ತಿದ್ದು, ಇದು ಕಾರ್ಯಕರ್ತರ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈಗ ಪಕ್ಷ ಮತ್ತೊಮ್ಮೆ ಅವಕಾಶ ನೀಡಿದ್ದು, ಜನತೆ ಅವಕಾಶ ನೀಡಿದರೆ ಬಂಟ್ವಾಳವನ್ನು ಮಾದರಿ ಕ್ಷೇತ್ರವನ್ನು ರೂಪಿಸುತ್ತೇನೆ ಎಂದರು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕ್ಷೇತ್ರ ಪ್ರವಾಸಿ ಹರಿದಾಸ್, ಚುನಾವಣಾ ಪ್ರಭಾರಿ ರವಿಶಂಕರ್ ಮಿಜಾರು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಾಧವ ಮಾವೆ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ ವೇದಿಕೆಯಲ್ಲಿದ್ದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here