ಶಾಂತಾ ಪುತ್ತೂರುರವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿ

0

ಪುತ್ತೂರು : ಬೆಂಗಳೂರಿನ ಜಾಗೃತಿ ಸೇವಾ ಟ್ರಸ್ಟ್ ಸೇವಾ ಸಂಸ್ಥೆ ಆಶ್ರಯ, ಎಡನೀರು ಮಠದ ಸಹಕಾರದೊಂದಿಗೆ ಎಡನೀರು ಮಠದಲ್ಲಿ ನಡೆದ ಗಡಿನಾಡಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ- 2023ನೇ ಸಾಲಿನ ಅಂತರ್ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರ ಹಾಗೂ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಏಪ್ರಿಲ್ 15ರಂದು ನಡೆಯಿತು.


ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೊಳುವಾರು ನಿವಾಸಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರುರವರನ್ನು ಹಲವು ಕ್ಷೇತ್ರಗಳಲ್ಲಿ ಸಾಧನೆ ಗುರುತಿಸಿ ಬಹುಮುಖ ಪ್ರತಿಭೆ ನೆಲೆಯಲ್ಲಿ ಡಾ.ರಾಜ್ ಕುಮಾರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಾಗೃತಿ ಟ್ರಸ್ಟ್ ಅಧ್ಯಕ್ಷ ಬಿ.ನಾಗೇಶ್, .ಬಿ.ಶಿವಕುಮಾರ್ ,ಸಮಾಜಸೇವಕಿ ಜ್ಯೋತಿ ರೆಡ್ಡಿ, ಡಾ.ಭಾಗೀರಥಿ,ಡಾ.ಸಿ.ಎಲ್.ಶಿವಮೂರ್ತಿ ಮೈಕ್ರೋ ಬಯಾಲಜಿ ವಿಭಾಗ ಕಿಮ್ಸ್ ಆಸ್ಪತ್ರೆ ಬೆಂಗಳೂರು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ಗುರುರಾಜ್ ಎಂ.ಆರ್ ಕಾಸರಗೋಡು,ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಸಭಾಧ್ಯಕ್ಷ ತೆ ವಹಿಸಿದ್ದರು.

ಡಾ.ಶೇಖರ್ ಅಜೆಕಾರುರವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ,ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here