ಎ.30: ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ವೇದಾವತಿ ಸೇವಾ ನಿವೃತ್ತಿ

0

ಹಿರೇಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ 3-12-2014ರಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ವೇದಾವತಿ ಎ. ಅವರು ಎ.30ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.


ವೇದಾವತಿಯವರು 27-1-1987ರಂದು ಕಾರ್ಕಳ ತಾಲೂಕಿನ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದರು. 23-6-1990ರಿಂದ ಕೆಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜು, 8-7-2002ರಿಂದ 2-12-2014ರ ತನಕ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಮುಖ್ಯಶಿಕ್ಷಕಿಯಾಗಿ ಭಡ್ತಿಗೊಂಡು 3-12-2014ರಿಂದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವಾ ಅವಧಿಯಲ್ಲಿ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ ಪುತ್ತೂರು ತಾಲೂಕಿನ ಅತ್ಯುತ್ತಮ ಮಾದರಿ ಪ್ರೌಢಶಾಲೆಯಾಗಿ ಮೂಡಿ ಬಂದು ಶೈಕ್ಷಣಿಕವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ದಾಖಲು ಮಾಡಿದ ಸಾಧನೆ ಮಾಡಿದೆ. ಸುಸಜ್ಜಿತ ಆರ್‌ಎಂಎಸ್‌ಎ ಕಟ್ಟಡ, ರಾಜ್ಯದಲ್ಲೇ ಮಾದರಿ ಭೋಜನ ಶಾಲೆ, ಸ್ಮಾರ್ಟ್ ಕ್ಲಾಸ್, ತಂತ್ರಜ್ಞಾನ ಅಳವಡಿತ ತರಗತಿ ಕೊಠಡಿಗಳು, ಶಾಲಾ ಸೌಂದರೀಕರಣ, ವಿಸ್ತೃತಗೊಂಡ ಕ್ರೀಡಾಂಗಣ, ಶಾಲಾ ಆವರಣ, ಈ-ಗ್ರಂಥಾಲಯ, ಸುಸಜ್ಜಿತ ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯ, ಮುಂತಾದ ಅಭಿವೃದ್ಧಿ ಕೆಲಸಗಳು ಇವರ ಅವಧಿಯಲ್ಲಿ ಕಾರ್ಯಗತಗೊಂಡಿವೆ. ಇವರ ಮಾರ್ಗದರ್ಶನದಲ್ಲಿ ಶಾಲಾ ಸಂಸತ್ತು, ಇನ್‌ಸ್ಪೈರ್ ಅವಾರ್ಡ್, ಚಿತ್ರ ಕಲಾಸ್ಪರ್ಧೆ, ಕ್ರೀಡಾಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪಾಲ್ಗೊಂಡಿದ್ದಾರೆ.


ವೇದಾವತಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸುಳ್ಯ ತಾಲೂಕಿನ ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಂದ್ರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣವನ್ನು ಗುತ್ತಿಗಾರು ಸರಕಾರಿ ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಬೆಸೆಂಟ್ ಬಾಲಕಿಯರ ಕಾಲೇಜು ಮಂಗಳೂರು, ಪದವಿ ಶಿಕ್ಷಣವನ್ನು ಕೆನರಾ ಕಾಲೇಜು ಮಂಗಳೂರು ಹಾಗೂ ಬಿಇಡಿ ಶಿಕ್ಷಣವನ್ನು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಪೂರೈಸಿರುತ್ತಾರೆ. ಸುಳ್ಯ ತಾಲೂಕು ಅಚ್ರಪ್ಪಾಡಿ ದಿ. ಬೆಳ್ಯಪ್ಪ ಗೌಡ ಹಾಗೂ ತಾರಾದೇವಿ ದಂಪತಿಯ ಪುತ್ರಿಯಾಗಿರುವ ಇವರು ಪ್ರಸ್ತುತ ತೆಂಕಿಲ ವಿಶ್ವೇದದಲ್ಲಿ ಪತಿ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ, ನಿವೃತ್ತ ಎಲ್‌ಐಸಿ ಉದ್ಯೋಗಿ ವಿಶ್ವನಾಥ ಗೌಡ, ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗಿಗಳಾಗಿರುವ ಪುತ್ರ ಸುಜಿತ್, ಸೊಸೆ ಲಿಖಿತ, ಪುತ್ರಿ ವಿಜೇತ ಹಾಗೂ ಅಳಿಯ ರಂಜಿತ್‌ರವರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here